ಕರ್ನಾಟಕ

karnataka

ETV Bharat / city

ಹೆಚ್​ಡಿಕೆ ಹಿಟ್ & ರನ್ ಮಾಡ್ತಾರೆ, ಅವರೊಬ್ಬ ಸುಳ್ಳ: ಸಿದ್ದು ಕಿಡಿ - ಹೆಚ್​ಡಿಕೆ ಹಿಟ್ & ರನ್ ಕೇಸ್ ಮಾಡ್ತಾರೆ,

ಕುಮಾರಸ್ವಾಮಿ ಹಿಟ್ ರನ್ ಮಾಡ್ತಾರೆ, ಅವರೊಬ್ಬ ಸುಳ್ಳ, ಅವರ ಹೇಳಿಕೆಗಳಿಗೆ ನೋ ರಿಯಾಕ್ಷನ್ ನೋ ರಿಯಾಕ್ಷನ್ ಎಂದು ಸಿದ್ದರಾಮಯ್ಯ ಅಸಮಾಧಾನ ಹೊರಹಾಕಿದ್ದಾರೆ.

siddaramaiah
ವಿಪಕ್ಷ ನಾಯಕ ಸಿದ್ದರಾಮಯ್ಯ

By

Published : Oct 17, 2021, 12:37 PM IST

Updated : Oct 17, 2021, 1:06 PM IST

ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಹೆಚ್ ​ಡಿ ಕುಮಾರಸ್ವಾಮಿ ಸುಳ್ಳು ಹೇಳ್ತಾರೆ. ಅದಕ್ಕೆ ನಾನು ಪ್ರತಿಕ್ರಿಯೆ ನೀಡಲ್ಲ ಎಂದು ಮಾಜಿ ಸಿಎಂ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಹಿಟ್ ರನ್ ಮಾಡ್ತಾರೆ, ಅವರೊಬ್ಬ ಸುಳ್ಳ, ಅವರ ಹೇಳಿಕೆಗಳಿಗೆ ನೋ ರಿಯಾಕ್ಷನ್ ನೋ ರಿಯಾಕ್ಷನ್ ಎಂದು ಎಂದು ಗರಂ ಆದ್ರು.

ಸಿದ್ದರಾಮಯ್ಯ ಪ್ರತಿಕ್ರಿಯೆ

ಇದೇ ವೇಳೆ ಪಕ್ಷದ ಮುಖಂಡ ಸಿ.ಎಂ. ಇಬ್ರಾಹಿಂ ಪ್ರಚಾರಕ್ಕೆ ಬರಬಹುದು. ಬರೋದ ಬೇಡ ಅಂದವರು ಯಾರು? ಪಕ್ಷದ ಎಲ್ಲರಿಗೂ ಕರೆದಿದ್ದೇವೆ. ಕಾಂಗ್ರೆಸ್ ಕಚೇರಿಯಿಂದಲೇ ತಿಳಿಸಲಾಗಿದೆ. ಯಾರಿಗೂ ಬೇಡ ಎಂದಿಲ್ಲ. ಇದು ಯಾರ ಮನೆ ಕೆಲಸ ಅಲ್ಲ, ಪಕ್ಷದ ಕೆಲಸ ಎಂದು ಸಿದ್ದರಾಮಯ್ಯ ಹೇಳಿದರು.

RSS ಒಂದು ಕೋಮುವಾದಿ ಸಂಘಟನೆ:

ಆರ್​ಎಸ್​ಎಸ್ ಅನ್ನು 1971ರಿಂದಲೂ ನಾನು ವಿರೋಧ ಮಾಡುತ್ತಾ ಬಂದಿದ್ದೇನೆ. ದೇಶ ವಿಭಜನೆ, ಸಮಾಜ ವಿಭಜನೆ ಕೆಲಸವನ್ನು ಆರ್.ಎಸ್.ಎಸ್ ಮಾಡ್ತಿದೆ. ಬಿಜೆಪಿಯಲ್ಲಿ ಒಬ್ಬರಾದ್ರೂ ಮುಸ್ಲಿಂ ಎಂ.ಎಲ್.ಎ ಇದ್ದಾರಾ? ಎಂದು ಪ್ರಶ್ನಿಸಿದರು. ಆರ್.ಎಸ್.ಎಸ್ ಅಲ್ಪಸಂಖ್ಯಾತರ ವಿರುದ್ಧ ಇದೆ. ಈಶ್ವರಪ್ಪ ಮುಸ್ಲಿಂರಿಗೆ ಆಫೀಸ್​ನಲ್ಲಿ ಕಸ ಹೊಡಿ ಅಂತಾರೆ, ಇದು ಮಾನವೀಯತೆಯಾ? ಸಂವಿಧಾನ ಬದಲಾವಣೆ ಮಾಡುತ್ತೇವೆ ಅಂತಾರೆ, ಸಂವಿಧಾನ ಬರೆದವರು ಯಾರು? ಸಂವಿಧಾನದ ವಿರುದ್ಧ ಇರುವವರೇ ಈ ಬಿಜೆಪಿಯವರು ಎಂದು ಸಿದ್ದರಾಮಯ್ಯ ಆರೋಪಿಸಿದರು.

ಇದನ್ನೂ ಓದಿ:ರಾಜ್ಯದಲ್ಲಿ ತೆರಿಗೆ ಕಡಿತ ಮಾಡಿ, ಪೆಟ್ರೋಲ್ ದರ ಇಳಿಕೆ: ಸಿಎಂ ಭರವಸೆ

ಸಂಗೂರು ಸಕ್ಕರೆ ಕಾರ್ಖಾನೆ ವಿಚಾರವಾಗಿ ಮಾತನಾಡಿದ ಅವರು, ಕಾರ್ಖಾನೆ ಅಧ್ಯಕ್ಷರಾಗಿದ್ದವರು ಯಾರು? ಅಧ್ಯಕ್ಷ ಉದಾಸಿ, ಸಜ್ಜನರ್ ಉಪಾಧ್ಯಕ್ಷ ಆಗಿದ್ದರು. ಇದನ್ನು ಕಾಂಗ್ರೆಸ್​ನವರು ಯಾಕೆ ಹಾಳು ಮಾಡುತ್ತಾರೆ? ಸಜ್ಜನರ ಉಪಾಧ್ಯಕ್ಷ, ಉದಾಸಿ ಅಧ್ಯಕ್ಷ ಆದಾಗ ಹಾಳಾಯ್ತು, ಜನ ಖಾರ್ಖಾನೆ ಬಗ್ಗೆ ಕೇಳುತ್ತಿದ್ದಾರೆ, ಹೀಗಾಗಿ ನಾನು‌ ಹೇಳಿದ್ದೇನೆ. ರೈತರಿಗೆ ಅನ್ಯಾಯ ಆಗಿದೆ, ಅದಕ್ಕೆ ಯಾರು ಹೊಣೆ? ಎಂದು ಪ್ರಶ್ನಿಸಿದರು.

Last Updated : Oct 17, 2021, 1:06 PM IST

ABOUT THE AUTHOR

...view details