ಕರ್ನಾಟಕ

karnataka

ETV Bharat / city

'ಸಿದ್ದರಾಮಯ್ಯ ಅವರೇ ಮುಂದಿನ ಸಿಎಂ’: ಹುಬ್ಬಳ್ಳಿ ಅಭಿಮಾನಿ ಬಳಗದಿಂದ ಆಲ್ಬಂ ಸಾಂಗ್ - ಸಿದ್ದರಾಮಯ್ಯ ಅವರೇ ನಮ್ಮ ಮುಂದಿನ ಸಿಎಂ ಕರುನಾಡಿನ ಜನತೆಯಿಂದ ಇದು ಖಾಯಂ

ಸಿದ್ದರಾಮಯ್ಯ ಅವರ 75ನೇ ವರ್ಷದ ಹುಟ್ಟುಹಬ್ಬದ ಹಿನ್ನೆಲೆ ಸಿದ್ದಾರಾಮಯ್ಯ ಅಮೃತ ಮಹೋತ್ಸವ- ಹುಬ್ಬಳ್ಳಿಯ ಅಭಿಮಾನಿ ಬಳಗದಿಂದ ಸಿದ್ಧವಾಯ್ತು ಸಾಂಗ್​- "ಸಿದ್ದರಾಮಯ್ಯ ಅವರೇ ನಮ್ಮ ಮುಂದಿನ ಸಿಎಂ, ಕರುನಾಡಿನ ಜನತೆಯಿಂದ ಇದು ಖಾಯಂ" ಎಂಬ ಆಲ್ಬಂ ಬಿಡುಗಡೆ

siddaramaiah
ಸಿದ್ದರಾಮಯ್ಯ

By

Published : Aug 1, 2022, 2:32 PM IST

ಹುಬ್ಬಳ್ಳಿ: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವಾಗಲೇ ಕಾಂಗ್ರೆಸ್ ಪಕ್ಷದಲ್ಲಿ ಸಿಎಂ ಪಟ್ಟಕ್ಕಾಗಿ ಫೈಟ್​ ಶುರುವಾಗಿದೆ. ಈ ಮಧ್ಯೆ 'ಸಿದ್ದರಾಮಯ್ಯ ಅವರೇ ಮುಂದಿನ ಸಿಎಂ, ಕರುನಾಡಿನ ಜನತೆಯಿಂದ ಇದು ಖಾಯಂ' ಎಂಬ ಆಲ್ಬಂ ಸಾಂಗ್ ಅನ್ನು ಅದ್ಧೂರಿಯಾಗಿ ಬಿಡುಗಡೆ ಮಾಡುವ ಮೂಲಕ ಗುದ್ದಾಟಕ್ಕೆ ಮತ್ತಷ್ಟು ತುಪ್ಪ ಸುರಿದಂತಾಗಿದೆ.

ಸಿದ್ದರಾಮಯ್ಯ ಅಭಿಮಾನಿ ಸಂಘದ ರಾಜ್ಯಾಧ್ಯಕ್ಷ ಗಿರೀಶ ಗದಿಗೆಪ್ಪಗೌಡ ಹಾಗೂ ಮಾಜಿ ಸಚಿವ ಸಂತೋಷ ಲಾಡ್ ಅವರು, ಸಿದ್ದರಾಮಯ್ಯ ಮುಂದಿನ ಸಿಎಂ ಎಂಬ ಅಲ್ಬಂ ಸಾಂಗ್ ಬಿಡುಗಡೆ ಮಾಡಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 75ನೇ ಜನ್ಮದಿನದ ಅಂಗವಾಗಿ ಈ ಹಾಡನ್ನು ಲೋಕಾರ್ಪಣೆ ಮಾಡಲಾಗಿದೆ.

ಸಿದ್ದರಾಮಯ್ಯ ಅವರೇ ಮುಂದಿನ ಸಿಎಂ ಆಲ್ಬಂ ಸಾಂಗ್

ಹುಬ್ಬಳ್ಳಿಯ ಖಾಸಗಿ ಹೋಟೆಲ್​ನಲ್ಲಿ ಭಾನುವಾರ ರಾತ್ರಿ ಸಿದ್ದರಾಮಯ್ಯ ಅಭಿಮಾನಿ ಬಳಗ ಈ ಆಲ್ಬಂ ಸಾಂಗ್ಅನ್ನು ಅನಾವರಣಗೊಳಿಸಲಾಗಿದ್ದು, ರಾಜ್ಯಾದ್ಯಂತ ಭಾರಿ ಸದ್ದು ಮಾಡುತ್ತಿದೆ.

ಇದನ್ನೂ ಓದಿ:ಸಿದ್ದು ಅಮೃತ ಮಹೋತ್ಸವ: ಬೆಣ್ಣೆನಗರಿಯಲ್ಲಿ ಮೈಸೂರು ಪಾಕ್ ಘಮಲು, ಹೇಗಿದೆ ಔತಣದ ಸಿದ್ಧತೆ?

ABOUT THE AUTHOR

...view details