ಹುಬ್ಬಳ್ಳಿ :ವಾಣಿಜ್ಯ ನಗರಿ ಜನರ ಬಹುದಿನಗಳ ಕನಸು ಈಡೇರಿದೆ. ಈಗ ಉತ್ತರ ಕರ್ನಾಟಕ ಭಾಗದ ಜನರ ಮುಖದಲ್ಲಿ ಮಂದಹಾಸ ಮೂಡಿದೆ.
ಹುಬ್ಬಳ್ಳಿ ರೈಲ್ವೆ ನಿಲ್ದಾಣಕ್ಕೆ ಬಂದ ಶ್ರೀ ಸಿದ್ಧಾರೂಢರ ಅಮೃತಶಿಲೆ.. - ನೈಋತ್ಯ ರೈಲ್ವೆಯ ವಿಭಾಗದ ವಾಣಿಜ್ಯನಗರಿ
ಹರ ಗುರು ಚರಮೂರ್ತಿ ಸಮ್ಮುಖದಲ್ಲಿ ಸ್ವಾಮಿ ವಿವೇಕಾನಂದರ ಮೂರ್ತಿಯನ್ನು ಲೋಕಾರ್ಪಣೆ ಮಾಡಲಾಯಿತು. ಅಲ್ಲದೇ ಇಂದು ಹುಬ್ಬಳ್ಳಿಯ ರೈಲ್ವೆ ನಿಲ್ದಾಣಕ್ಕೆ ಸದ್ಗುರು ಸಿದ್ಧಾರೂಢರ ಮೂರ್ತಿಯನ್ನು ಕೂಡ ತೆಗೆದುಕೊಂಡು ಬರಲಾಗಿದೆ. ಕ್ರೇನ್ ಮೂಲಕ ಸೂಚಿಸಿದ ಸ್ಥಳದಲ್ಲಿ ಶ್ರೀ ಸಿದ್ಧಾರೂಢರ ಮೂರ್ತಿಯನ್ನಿಡಲಾಗಿದೆ..
ನೈಋತ್ಯ ರೈಲ್ವೆಯ ವಿಭಾಗದ ವಾಣಿಜ್ಯನಗರಿ ಹುಬ್ಬಳ್ಳಿಯ ರೈಲ್ವೆ ನಿಲ್ದಾಣಕ್ಕೆ ಶ್ರೀ ಸಿದ್ಧಾರೂಢರ ಹೆಸರು ನಾಮಕರಣ ಮಾಡಿದ ಬೆನ್ನಲ್ಲೇ ಈಗ ಸಿದ್ಧಾರೂಢರು ಕೂಡ ಹುಬ್ಬಳ್ಳಿ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದಾರೆ.
ಹರ ಗುರು ಚರಮೂರ್ತಿ ಸಮ್ಮುಖದಲ್ಲಿ ಸ್ವಾಮಿ ವಿವೇಕಾನಂದರ ಮೂರ್ತಿಯನ್ನು ಲೋಕಾರ್ಪಣೆ ಮಾಡಲಾಯಿತು. ಅಲ್ಲದೇ ಇಂದು ಹುಬ್ಬಳ್ಳಿಯ ರೈಲ್ವೆ ನಿಲ್ದಾಣಕ್ಕೆ ಸದ್ಗುರು ಸಿದ್ಧಾರೂಢರ ಮೂರ್ತಿಯನ್ನು ಕೂಡ ತೆಗೆದುಕೊಂಡು ಬರಲಾಗಿದೆ. ಕ್ರೇನ್ ಮೂಲಕ ಸೂಚಿಸಿದ ಸ್ಥಳದಲ್ಲಿ ಶ್ರೀ ಸಿದ್ಧಾರೂಢರ ಮೂರ್ತಿಯನ್ನಿಡಲಾಗಿದೆ.
ಅಮೃತಶಿಲೆಯಲ್ಲಿ ಜೈಪುರದಿಂದ ತಯಾರಿಸಿದ ಶ್ರೀಸಿದ್ಧಾರೂಢರ ಮೂರ್ತಿಯನ್ನು ತೆಗೆದುಕೊಂಡು ಬರಲಾಗಿದ್ದು, ವ್ಯವಸ್ಥಾಪಕ ನಿರ್ದೇಶಕರಾದ ಅಜಯಕುಮಾರ್ ಸಿಂಗ್ ಅವರ ನಿರ್ದೇಶನದಲ್ಲಿಯೇ ರೈಲ್ವೆ ಆವರಣದಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ಅಲ್ಲದೇ ಶೀಘ್ರವಾಗಿ ಸಂಪ್ರದಾಯದ ಮೂಲಕ ಲೋಕಾರ್ಪಣೆಗೊಳ್ಳಲಿದೆ.