ಕರ್ನಾಟಕ

karnataka

ETV Bharat / city

ಮೇ. 3ರವರೆಗೆ ಮದ್ಯ ಮಾರಾಟ-ಸಾಗಾಟ ನಿಷೇಧ! - ಮೇ.3 ರವರೆಗೆ ಮದ್ಯಪಾನ, ಮಾರಾಟ-ಸಾಗಾಟ ನಿಷೇಧ

ಕೊರೊನಾ ವೈರಸ್ ಸೋಂಕು ಹರಡದಂತೆ ಸಾರ್ವಜನಿಕರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಮೇ 3ರವರೆಗೆ ಎಲ್ಲಾ ಮದ್ಯದ ಅಂಗಡಿಗಳು, ಬಾರ್ ಮತ್ತು ಕ್ಲಬ್‍ಗಳಲ್ಲಿ ಮದ್ಯ ಮಾರಾಟ, ಸಾಗಾಣಿಕೆಯನ್ನು ನಿಷೇಧಿಸಲಾಗಿದೆ.

shock-for-liquor-lovers-ban-on-liquor-sale-till-may-3
ಮದ್ಯ ಪ್ರಿಯರಿಗೆ ಶಾಕ್​ ಕೊಟ್ಟ ಸರ್ಕಾರ, ಮೇ.3 ರವರೆಗೆ ಮದ್ಯಪಾನ, ಮಾರಾಟ-ಸಾಗಾಟ ನಿಷೇಧ..!

By

Published : Apr 15, 2020, 10:58 PM IST

ಧಾರವಾಡ: ಕೊರೊನಾ ವೈರಸ್ ಸೋಂಕು ಹರಡದಂತೆ ಸಾರ್ವಜನಿಕರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಮೇ. 3ರವರೆಗೆ ಎಲ್ಲಾ ಮದ್ಯದ ಅಂಗಡಿಗಳು, ಬಾರ್ ಮತ್ತು ಕ್ಲಬ್‍ಗಳಲ್ಲಿ ಮದ್ಯ ಮಾರಾಟ, ಸಾಗಾಣಿಕೆಯನ್ನು ನಿಷೇಧಿಸಿ ಜಿಲ್ಲಾಧಿಕಾರಿ ದೀಪಾ ಚೋಳನ್ ಆದೇಶ ಹೊರಡಿಸಿದ್ದಾರೆ.

ಮದ್ಯದ ಅಂಗಡಿಗಳು, ಮದ್ಯದ ಡಿಪೋಗಳನ್ನು ಈ ನಿಷೇಧಾಜ್ಞೆ ಜಾರಿಯಲ್ಲಿರುವ ಅವಧಿಯಲ್ಲಿ ಮುಚ್ಚಿರಬೇಕು. ಇದಲ್ಲದೇ ಪರಿಸ್ಥಿತಿಗೆ ಅನುಗುಣವಾಗಿ ಸಾರ್ವಜನಿಕರು ಶಾಂತತೆಯನ್ನು ಕಾಯ್ದುಕೊಂಡು ಬರುವ ದೃಷ್ಟಿಯಿಂದ ವಲಯ ಅಬಕಾರಿ ಹಾಗೂ ಉಪ ವಿಭಾಗ ಅಬಕಾರಿ ಅಧೀಕ್ಷಕರು, ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 21 (2)ರ ಅನ್ವಯ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.


ABOUT THE AUTHOR

...view details