ಕರ್ನಾಟಕ

karnataka

ETV Bharat / city

ಶಿವಯೋಗಿ ಸಿದ್ಧರಾಮೇಶ್ವರರ 848ನೇ ಜಯಂತ್ಯುತ್ಸವ... ಶಾಸಕ ಪ್ರಸಾದ ಅಬ್ಬಯ್ಯ ಚಾಲನೆ - ಶಿವಯೋಗಿ ಸಿದ್ಧರಾಮೇಶ್ವರ 848ನೇ ಜಯಂತೋತ್ಸ

ಭೋವಿ ವಡ್ಡರ ಸಮಾಜ ಮತ್ತು ಧಾರವಾಡ ಜಿಲ್ಲಾ ಭೋವಿ ವಡ್ಡರ ನೌಕರರ ಸಂಘದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಶಿವಯೋಗಿ ಸಿದ್ಧರಾಮೇಶ್ವರರ 848ನೇ ಜಯಂತ್ಯುತ್ಸ ಕಾರ್ಯಕ್ರಮಕ್ಕೆ ಶಾಸಕ ಪ್ರಸಾದ ಅಬ್ಬಯ್ಯ ಚಾಲನೆ ನೀಡಿದರು.

Kn_hbl_03_sidaram_jayanti_av_7208089
ಶಿವಯೋಗಿ ಸಿದ್ಧರಾಮೇಶ್ವರ 848ನೇ ಜಯಂತೋತ್ಸ, ಶಾಸಕ ಪ್ರಸಾದ ಅಬ್ಬಯ್ಯ ಚಾಲನೆ

By

Published : Feb 11, 2020, 2:10 PM IST

ಹುಬ್ಬಳ್ಳಿ: ತಾಲೂಕು ಭೋವಿ ವಡ್ಡರ ಸಮಾಜ ಮತ್ತು ಧಾರವಾಡ ಜಿಲ್ಲಾ ಭೋವಿ ವಡ್ಡರ ನೌಕರರ ಸಂಘದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಶಿವಯೋಗಿ ಸಿದ್ಧರಾಮೇಶ್ವರರ 848ನೇ ಜಯಂತ್ಯುತ್ಸವಕ್ಕೆ ಶಾಸಕ ಪ್ರಸಾದ ಅಬ್ಬಯ್ಯ ಚಾಲನೆ ನೀಡಿದರು.

ಶಿವಯೋಗಿ ಸಿದ್ಧರಾಮೇಶ್ವರ 848ನೇ ಜಯಂತ್ಯುತ್ಸವಕ್ಕೆ ಶಾಸಕ ಪ್ರಸಾದ ಅಬ್ಬಯ್ಯ ಚಾಲನೆ

ಬಳಿಕ ಮಾತನಾಡಿದ ಅವರು, ಧಾರ್ಮಿಕ ಕಾರ್ಯಕ್ರಮಗಳನ್ನು ಎಲ್ಲರೂ ಒಟ್ಟುಗೂಡಿ ಆಚರಿಸುವುದು ವಿಶೇಷವಾಗಿದೆ. ಶಿವಯೋಗಿ ಸಿದ್ದರಾಮೇಶ್ವರ ಅವರ ಜೀವನ ಹಾಗೂ ಆದರ್ಶಗಳು ಯುವ ಸಮುದಾಯಕ್ಕೆ ಹಾಗೂ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುವಂತದ್ದಾಗಿದ್ದು, ಪ್ರತಿಯೊಬ್ಬರು ಕೂಡ ಮಹಾನ್ ಸಾಧಕರ ತತ್ವ ಸಿದ್ಧಾಂತಗಳ ಮೇಲೆ ಜೀವನ ರೂಪಿಸಿಕೊಳ್ಳುವುದು ಒಳಿತು ಎಂದರು. ಈ ಸಂದರ್ಭದಲ್ಲಿ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯವರು ಅಂಬೇಡ್ಕರ್ ಪುತ್ಥಳಿಕೆಗೆ ಮಾಲಾರ್ಪಣೆ ಮಾಡಿದರು.

ABOUT THE AUTHOR

...view details