ಹುಬ್ಬಳ್ಳಿ: ಕಮರಿಪೇಟೆಯಲ್ಲಿ ಪ್ರತಿ ವರ್ಷವೂ ದಸರಾ ಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಣೆ ಮಾಡಲಾಗುತ್ತದೆ. ಈ ಬಾರಿಯೂ ಕಮರಿಪೇಟೆಯ ಟಗರು ಕಾಳಗ ಎಲ್ಲರ ಗಮನ ಸೆಳೆಯಿತು.
ಉತ್ತರ ಕರ್ನಾಟಕದ ಹೃದಯ ಭಾಗದಲ್ಲಿರುವ ಹುಬ್ಬಳ್ಳಿಯ ಕಮರಿಪೇಟೆಯಲ್ಲಿ ದಸರಾ ಹಬ್ಬವನ್ನು ಟಗರು ಕಾಳಗದ ಮೂಲಕ ಆಚರಣೆ ಮಾಡಲಾಗುತ್ತದೆ. ಸುಮಾರು ವರ್ಷಗಳಿಂದ ಟಗರು ಕಾಳಗದ ಮೂಲಕ ದಸರಾ ಆಚರಿಸಲಾಗುತ್ತಿದ್ದು, ಈ ಕಾಳಗಕ್ಕೆ ಐತಿಹಾಸಿಕ ಹಿನ್ನೆಲೆಯಿದೆ. ಮನುಷ್ಯರಿಗೆ ಮಾತ್ರ ಮನರಂಜನೆಯಲ್ಲ ಪ್ರಾಣಿಗಳಿಗೂ ಕೂಡ ಒಂದು ಸ್ಪರ್ಧೆಯ ಮೂಲಕ ಮನರಂಜನೆ ನೀಡಬೇಕು ಎಂಬ ಸದುದ್ದೇಶದಿಂದ ಕಮರಿಪೇಟೆಯಲ್ಲಿ ಪ್ರತಿ ವರ್ಷವೂ ಟಗರಿನ ಕಾಳಗ ಆಯೋಜಿಸಲಾಲಾಗುತ್ತದೆ.