ಧಾರವಾಡ:ಜಿಲ್ಲೆಯ ಖಾಸಗಿ ಕಾಲೇಜು ಅಧ್ಯಕ್ಷ ಮತ್ತು ಪ್ರಿನ್ಸಿಪಾಲ್ ಇಬ್ಬರು ವಿದ್ಯಾರ್ಥಿನಿ ಪುಸಲಾಯಿಸಿ ಅತ್ಯಾಚಾರ ಮಾಡಿರುವ ಗಂಭೀರ ಆರೋಪ ಕೇಳಿ ಬಂದಿದೆ. ವಿದ್ಯಾರ್ಥಿನಿಯರ ಜೊತೆ ಅಸಭ್ಯ ವರ್ತನೆ ಹಿನ್ನೆಲೆ ಧಾರವಾಡದ ಖಾಸಗಿ ಕಾಲೇಜಿನ ಪ್ರಿನ್ಸಿಪಾಲ್ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಕಾಲೇಜು ಪ್ರಿನ್ಸಿಪಾಲ್ ಮಹಾದೇವ ಕುರವತ್ತಿಗೌಡರನ್ನು ವಶಕ್ಕೆ ಪಡೆದಿರುವ ಪೊಲೀಸರು ಪ್ರಕರಣದ ಕುರಿತು ತೀವ್ರ ವಿಚಾರಣೆ ನಡೆಸಿದ್ದಾರೆ. ಪ್ರಕರಣದಲ್ಲಿ ಕುರುವತ್ತಿಗೌಡರ್ ಎರಡನೇ ಆರೋಪಿಯಾಗಿದ್ದಾರೆ. ಒಂದನೇ ಆರೋಪಿಯಾಗಿರುವ ಬಸವರಾಜ ಯಡವಣ್ಣವರ ಎಸ್ಕೇಪ್ ಆಗಿದ್ದು, ಸದ್ಯ ನೊಂದ ವಿದ್ಯಾರ್ಥಿಯರನ್ನು ವೈದ್ಯಕೀಯ ತಪಾಸಣೆ ಮಾಡಿಸಲಾಗಿದೆ ಎಂದು ತಿಳಿದು ಬಂದಿದೆ.
ಪ್ರಿನ್ಸಿಪಾಲ್ ಮತ್ತು ಕಾಲೇಜು ಅಧ್ಯಕ್ಷರ ವಿರುದ್ಧ ದೂರು: ಕಾಲೇಜು ವಿದ್ಯಾರ್ಥಿನಿಯರು ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದಾರೆ. ದೇವಸ್ಥಾನಕ್ಕೆ ಹಾಗೂ ಆಸ್ಪತ್ರೆಗೆ ಸೇರಿದಂತೆ ಬೇರೆ ಬೇರೆ ಪ್ರದೇಶಗಳಿಗೆ ಕರೆದುಕೊಂಡು ಹೋಗುವ ನೆಪದಲ್ಲಿ ನಮ್ಮ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.