ಕರ್ನಾಟಕ

karnataka

ETV Bharat / city

ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; ಸುಳ್ಳು ಎಂದ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆ - ಡಿ-ಗ್ರೂಪ್ ಸಿಬ್ಬಂದಿಯಿಂದ ಲೈಂಗಿಕ ದೌರ್ಜನ್ಯ

ಕೋವಿಡ್ ಸೋಂಕು ತಗುಲಿ ಪಾರ್ಶುವಾಯ ಪೀಡಿತೆಯಾಗಿರುವ ನನ್ನ ತಾಯಿ ಮೇಲೆ ಆಸ್ಪತ್ರೆಯ ಡಿ-ಗ್ರೂಪ್ ಸಿಬ್ಬಂದಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮಹಿಳೆ ಪುತ್ರ ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸಿ ದೂರು ದಾಖಲಿಸಿಕೊಳ್ಳಲು ಮುಂದಾಗಿದ್ದಾರೆ.

sexual-harassment
ಸಿಬ್ಬಂದಿಯಿಂದ ಲೈಂಗಿಕ ದೌರ್ಜನ್ಯ ಆರೋಪ

By

Published : May 26, 2021, 4:08 PM IST

ಹುಬ್ಬಳ್ಳಿ:ಕೋವಿಡ್ ಸೋಂಕಿತ ಮಹಿಳೆ ಮೇಲೆ ಖಾಸಗಿ ಆಸ್ಪತ್ರೆಯ ಸಿಬ್ಬಂದಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.‌

ಓದಿ: ಸಾಂಸ್ಕೃತಿಕ ನಗರಿಯಲ್ಲಿ ಹೀನ ಕೃತ್ಯ: ಭಿಕ್ಷುಕಿಗೆ ಮದ್ಯ ಕುಡಿಸಿ ಗ್ಯಾಂಗ್​ ರೇಪ್, ಕೊಲೆ​!

ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ, ಬಳ್ಳಾರಿಯ ಸಿರಗುಪ್ಪ ತಾಲೂಕಿನ 52 ವರ್ಷದ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂಬ ಗಂಭೀರ ಆರೋಪವನ್ನು ಸೋಂಕಿತೆಯ ಪುತ್ರ ಮಾಡಿದ್ದಾನೆ.

ಕೋವಿಡ್ ಸೋಂಕು ತಗುಲಿ ಪಾರ್ಶುವಾಯ ಪೀಡಿತೆಯಾಗಿರುವ ನನ್ನ ತಾಯಿ ಮೇಲೆ ಆಸ್ಪತ್ರೆಯ ಡಿ-ಗ್ರೂಪ್ ಸಿಬ್ಬಂದಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮಹಿಳೆ ಪುತ್ರ ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸ್ ಅಧಿಕಾರಿಗಳು ಪರಿಶೀಲನೆ ನಡೆಸಿ ದೂರು ದಾಖಲಿಸಿಕೊಳ್ಳಲು ಮುಂದಾಗಿದ್ದಾರೆ.

ಆರೋಪ ನಿರಾಕರಿಸಿದ ಆಸ್ಪತ್ರೆ ಎಂಡಿ:

ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದ ಆರೋಪವನ್ನು ಬಾಲಾಜಿ ಆಸ್ಪತ್ರೆಯ ಎಂಡಿ ಕ್ರಾಂತಿ ಕಿರಣ ನಿರಾಕರಿಸಿದ್ದಾರೆ. ಈಟಿವಿ ಭಾರತಕ್ಕೆ ದೂರವಾಣಿ ಮೂಲಕ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಆಸ್ಪತ್ರೆಯ ಸಿಬ್ಬಂದಿಯಿಂದ ತಪ್ಪು ನಡೆದಿಲ್ಲ. ಸಿಬ್ಬಂದಿ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಶುದ್ದ ಸುಳ್ಳು. ಸೋಂಕಿತ ಮಹಿಳೆಗೆ ಪಾರ್ಶ್ವವಾಯ ಆಗಿದ್ದು, ಅವರನ್ನ ಸ್ಕ್ಯಾನಿಂಗ್ ಮಾಡಿಸುವ ವೇಳೆ ಆಸ್ಪತ್ರೆಯ ಸಿಬ್ಬಂದಿ ಲಿಪ್ಟ್ ಮಾಡಿರಬಹುದು.

ಲೈಂಗಿಕ ದೌರ್ಜನ್ಯದ ಆರೋಪ ಮಾಡುವ ಪುತ್ರ ಆಸ್ಪತ್ರೆಯ ಅನುಮತಿ ಇಲ್ಲದೇ ಕೋವಿಡ್ ವಾರ್ಡ್​ ಪ್ರವೇಶ ಮಾಡಿದ್ದಾರೆ. ಅದನ್ನ ಪ್ರಶ್ನೆ ಮಾಡಿದ್ದಕ್ಕೆ ಲೈಂಗಿಕ ದೌರ್ಜನ್ಯದ ಆರೋಪ ಮಾಡುತ್ತಾ ಇದ್ದಾರೆ. ನಮ್ಮ ಆಸ್ಪತ್ರೆಯ ಸಿಸಿ ಕ್ಯಾಮರಾಗಳಲ್ಲಿ ಎಲ್ಲವೂ ದಾಖಲಾಗಿದೆ. ತನಿಖೆಯಿಂದ ಎಲ್ಲವೂ ದೃಢಪಡಲಿದೆ ಎಂದಿದ್ದಾರೆ.

ABOUT THE AUTHOR

...view details