ಕರ್ನಾಟಕ

karnataka

By

Published : Jul 9, 2020, 10:34 PM IST

ETV Bharat / city

ಧಾರವಾಡ ಜಿಲ್ಲೆಯಲ್ಲಿ ಇಂದು 75 ಜನರಿಗೆ ಕೊರೊನಾ: 832ಕ್ಕೇರಿದ ಸೋಂಕಿತರ ಸಂಖ್ಯೆ

ಕೊರೊನಾ ಕರುನಾಡಿಗೆ ಕಂಟಕಪ್ರಾಯವಾಗಿದ್ದು, ಧಾರವಾಡದಲ್ಲಿ ಇಂದು ಒಂದೇ ದಿನ 75 ಜನರಿಗೆ ಸೋಂಕು ತಗುಲಿರುವುದು ಖಚಿತವಾಗಿದೆ.

dharwad
ಧಾರವಾಡ ಜಿಲ್ಲಾ ಕೊರೊನಾ ಸೋಂಕಿತ ಪ್ರಕರಣಗಳು

ಧಾರವಾಡ: ಜಿಲ್ಲೆಯಲ್ಲಿ ಇಂದು 75 ಜನ ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 832ಕ್ಕೇರಿಕೆಯಾಗಿದೆ.

ಇಂದು 27 ಜನರಿಗೆ ಸೋಂಕಿತರ ಸಂಪರ್ಕದಿಂದ, 32 ಜ‌ನರಲ್ಲಿ ಐಎಲ್ಐ ಕಾರಣ ಪರೀಕ್ಷಿಸಿದಾಗ ಸೋಂಕು ದೃಢಪಟ್ಟಿದೆ. ಸಾರಿ ತೊಂದರೆ‌ ಇದ್ದ ಇಬ್ಬರು, ಅಂತರ್ ಜಿಲ್ಲಾ ಪ್ರವಾಸದಿಂದ ಒಬ್ಬರಿಗೆ ಸೋಂಕು ಕಾಣಿಸಿಕೊಂಡಿದೆ. 13 ಸೋಂಕಿತರ ಸಂಪರ್ಕ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ.

ಜಿಲ್ಲೆಯಲ್ಲಿ ಜುಲೈ 3ರಿಂದ ಜುಲೈ 9ರ ಅವಧಿಯಲ್ಲಿ 7 ಜನ ಮೃತಪಟ್ಟಿರುವ ಕುರಿತು ಆರೋಗ್ಯ ಇಲಾಖೆ ಇಂದಿನ ಬುಲೆಟಿನ್‌ನಲ್ಲಿ ಮಾಹಿತಿ‌ ನೀಡಿದ್ದು, ಸಾವಿನ ಸಂಖ್ಯೆ 27ಕ್ಕೇರಿದೆ. ಇಲ್ಲಿವರೆಗೆ 293 ಜನ ಸೋಂಕಿತರು ಗುಣಮುಖರಾಗಿದ್ದಾರೆ.

ABOUT THE AUTHOR

...view details