ಹುಬ್ಬಳ್ಳಿ:ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಕೋವಿಡ್ ಸಂದರ್ಭದಲ್ಲಿಯೂ ಕೂಡ ದಾಖಲೆಯ ತೆರಿಗೆ ಸಂಗ್ರಹಿಸಿ ಸುದ್ದಿಯಲ್ಲಿತ್ತು. ಆದರೆ ಈಗ ಸಾರ್ವಜನಿಕರು, ಉದ್ಯಮ ಘಟಕಗಳು ಹಾಗೂ ಸರ್ಕಾರಗಳ ಕಚೇರಿಗಳು ಸರಿಯಾದ ರೀತಿಯಲ್ಲಿ ತೆರಿಗೆ ಕಟ್ಟದೆ ಬಾಕಿ ಉಳಿಸಿಕೊಂಡಿದ್ದು ಪಾಲಿಕೆ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ.
ಪಾಲಿಕೆಗೆ ಬರಬೇಕಿದ್ದ 100 ಕೋಟಿ ರೂ ತೆರಿಗೆ ಹಣದಲ್ಲಿ ಈವರೆಗೆ ಶೇ 40ರಷ್ಟು ಮಾತ್ರ ಸಂಗ್ರಹವಾಗಿದೆ. 60 ಕೋಟಿಗೂ ಅಧಿಕ ತೆರಿಗೆ ಹಣ ಇನ್ನಷ್ಟೇ ಸಂಗ್ರಹವಾಗಬೇಕು. ಸರ್ಕಾರದ ಹಂತದಲ್ಲಿಯೂ ಕೂಡ ಬಾಕಿ ಉಳಿಸಿಕೊಳ್ಳಲಾಗಿದೆ. ಹೀಗಾಗಿ, ಅಭಿವೃದ್ಧಿ ಕಾರ್ಯಗಳಿಗೆ ಹಣದ ಕೊರತೆಯಾಗುತ್ತಿದೆ. ಈ ಸಂಗತಿಯನ್ನು ಈಗಾಗಲೇ ಸರ್ಕಾರದ ಗಮನಕ್ಕೆ ತಂದು ಪತ್ರ ಕೂಡ ಬರೆದಿದ್ದೇವೆ ಅಂತಾರೆ ಪಾಲಿಕೆ ಮೇಯರ್.