ಧಾರವಾಡ:ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದ ಕೋಶಾಧ್ಯಕ್ಷರಾಗಿದ್ದ ಹಿರಿಯ ಕನ್ನಡಪರ ಚಿಂತಕ ಕೃಷ್ಣ ಜೋಶಿ (76) ಗೋವಾದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಕೃಷ್ಣ ಜೋಶಿ ಅವರು, ಉತ್ತರ ಕರ್ನಾಟಕ ಸೈನಿಕರ ಕಲ್ಯಾಣ ಸಮಿತಿ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ದೇಶದ ಮೊದಲ ಕಾರ್ಗಿಲ್ ಸ್ತೂಪ್ ಸ್ಥಾಪನೆಯ ರೂವಾರಿಯಾಗಿಯೂ ಕೆಲಸ ಮಾಡಿದ್ದರು.
ಇಂದು ಬೆಳಗ್ಗೆ 9.30ಕ್ಕೆ ಧಾರವಾಡ ಕಾರ್ಗಿಲ್ ಸ್ತೂಪ್‌ಕ್ಕೆ ಅವರ ಪಾರ್ಥಿವ ಶರೀರ ಆಗಮಿಸಿದ್ದು, ಅಂತಿನ ನಮನ ಸಲ್ಲಿಕೆಗೆ ವ್ಯವಸ್ಥೆ ಮಾಡಲಾಗಿದೆ. ನಂತರ 10 ರಿಂದ 11ರವರೆಗೆ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಇದಾದ ನಂತರ ಹೊಸ ಯಲ್ಲಾಪುರ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.
ಇದನ್ನೂ ಓದಿ:ಹಿರಿಯ ನಟ ದಿಲೀಪ್ ಕುಮಾರ್ ವಿಧಿವಶ.. ಬಾಲಿವುಡ್ನ 'ದೇವದಾಸ್' ಇನ್ನಿಲ್ಲ