ಹುಬ್ಬಳ್ಳಿ: ಮೊದ-ಮೊದಲು ವೈದ್ಯಕೀಯ ಸಿಬ್ಬಂದಿಯೇ ಕೋವಿಡ್ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದರು. ಇದೀಗ ವ್ಯಾಕ್ಸಿನ್ ಪಡೆದುಕೊಳ್ಳಲು ಜನರೇ ಸ್ವಯಂಪ್ರೇರಿತವಾಗಿ ಆಗಮಿಸುತ್ತಿದ್ದಾರೆ.
ಲಸಿಕೆ ಪಡೆಯಲು ಕಿಮ್ಸ್ನತ್ತ ಮುಖ ಮಾಡಿದ ಅವಳಿನಗರದ ಜನತೆ - ಕೋವಿಶಿಲ್ಡ್ ವ್ಯಾಕ್ಸಿನ್
ಜಗತನ್ನೇ ತಲ್ಲಣಗೊಳಿಸಿದ ಮಹಾಮಾರಿ ಕೊರೊನಾ ವೈರಸ್ ಆತಂಕದಿಂದ ಜನರು ತಮ್ಮ ಆತ್ಮೀಯರನ್ನೇ ಮುಟ್ಟಲು, ಮಾತನಾಡಿಸಲು ಹೆದರುತ್ತಿದ್ದರು. ಇದೀಗ ಜನರಲ್ಲಿ ಕೊರೊನಾ ಭೀತಿ ದೂರವಾಗಿದೆ. ಅವಳಿನಗರದ ಜನರು ಕೂಡ ಜಾಗೃತರಾಗಿ, ಕೋವಿಡ್ ವ್ಯಾಕ್ಸಿನ್ ಪಡೆಯಲು ಕಿಮ್ಸ್ನತ್ತ ಮುಖ ಮಾಡಿದ್ದಾರೆ.
![ಲಸಿಕೆ ಪಡೆಯಲು ಕಿಮ್ಸ್ನತ್ತ ಮುಖ ಮಾಡಿದ ಅವಳಿನಗರದ ಜನತೆ Self-motivated people to get covid Vaccine in Hubli](https://etvbharatimages.akamaized.net/etvbharat/prod-images/768-512-10836110-219-10836110-1614672304022.jpg)
ಕೋವಿಶಿಲ್ಡ್ ಲಸಿಕೆ ಪಡೆಯಲು ಕಿಮ್ಸ್ನತ್ತ ಮುಖ ಮಾಡಿದ ಅವಳಿನಗರದ ಜನತೆ
ಲಸಿಕೆ ಪಡೆಯಲು ಕಿಮ್ಸ್ನತ್ತ ಮುಖ ಮಾಡಿದ ಅವಳಿನಗರದ ಜನತೆ
ಜಗತನ್ನೇ ತಲ್ಲಣಗೊಳಿಸಿದ ಮಹಾಮಾರಿ ಕೊರೊನಾ ವೈರಸ್ ಆತಂಕದಿಂದ ಜನರು ತಮ್ಮ ಆತ್ಮೀಯರನ್ನೇ ಮುಟ್ಟಲು, ಮಾತನಾಡಿಸಲು ಹೆದರುತ್ತಿದ್ದರು. ಇದೀಗ ಜನರಲ್ಲಿ ಕೊರೊನಾ ಭೀತಿ ದೂರವಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೊರೊನಾ ನಿಯಂತ್ರಣಕ್ಕೆ ಹಲವಾರು ಜನಪರ ಯೋಜನೆಯನ್ನು ಕೈಗೆತ್ತಿಕೊಂಡಿವೆ. ಭಾರತ ಸರ್ಕಾರ ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಗೆಲುವು ಸಾಧಿಸಿದ್ದು, ವ್ಯಾಕ್ಸಿನ್ ಬಿಡುಗಡೆಗೊಳಿಸಿದೆ.
ನಿನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ವ್ಯಾಕ್ಸಿನ್ ಪಡೆದುಕೊಂಡಿದ್ದರು. ಅವಳಿನಗರದ ಜನರು ಕೂಡ ಜಾಗೃತರಾಗಿ, ವ್ಯಾಕ್ಸಿನ್ ಪಡೆಯಲು ಕಿಮ್ಸ್ನತ್ತ ಮುಖ ಮಾಡಿದ್ದಾರೆ.