ಕರ್ನಾಟಕ

karnataka

ETV Bharat / city

ಹುಬ್ಬಳ್ಳಿಯ ಗಲಭೆ ಪ್ರಕರಣ : ಪರಿಸ್ಥಿತಿ ಹತೋಟಿಗೆ ಬಂದ ಹಿನ್ನೆಲೆ ನಿಷೇಧಾಜ್ಞೆ ವಾಪಸ್

hubli stone pelting case : ಪರಿಸ್ಥಿತಿ ಹತೋಟಿಗೆ ಬಂದ ಹಿನ್ನೆಲೆ ಹುಬ್ಬಳ್ಳಿಯಲ್ಲಿ ನಿಷೇಧಾಜ್ಞೆ ವಾಪಸ್​​ ಪಡೆಯಲಾಗಿದೆ..

hubli-dharwad Police Commissioner
ಹು-ಧಾ ಪೊಲೀಸ್ ಆಯುಕ್ತ ಲಾಬೂರಾಮ್

By

Published : Apr 24, 2022, 9:24 AM IST

ಹುಬ್ಬಳ್ಳಿ:ಹಳೆ ಹುಬ್ಬಳ್ಳಿಯ ಗಲಭೆ ಪ್ರಕರಣ ಪರಿಸ್ಥಿತಿ ಹತೋಟಿಗೆ ಬಂದ ಹಿನ್ನೆಲೆ ಹುಬ್ಬಳ್ಳಿ ನಿಷೇಧಾಜ್ಞೆ ವಾಪಸ್​​ ಪಡೆಯಲಾಗಿದೆ. ಹು-ಧಾ ಪೊಲೀಸ್ ಆಯುಕ್ತ ಲಾಬೂರಾಮ್​ ಅವರು ಗಲಭೆ ಹಿನ್ನೆಲೆಯಲ್ಲಿ ನಗರದ ದಕ್ಷಿಣ ಉಪ ವಿಭಾಗ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿದ್ದರು. ಸದ್ಯ ಪರಿಸ್ಥಿತಿ ಶಾಂತವಾದ ಹಿನ್ನೆಲೆ ಕಲಂ 144 ಸೆಕ್ಷನ್​​ನ್ನು ಹಿಂದಕ್ಕೆ ಪಡೆದುಕೊಂಡಿದ್ದಾರೆ.

ಗಲಭೆ ಸಂದರ್ಭದಲ್ಲಿ ಏ.16ರಂದು ರಾತ್ರಿಯಿಂದಲೇ ನಗರದಾದ್ಯಂತ ಪೊಲೀಸ್​ ಆಯುಕ್ತರು ಸಿಆರ್​ಪಿಸಿ 144 ಕಲಂ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿದ್ದರು. ಬಳಿಕ ಏ.20 ರಿಂದ 23ರ ಬೆಳಗ್ಗೆ 6 ಗಂಟೆವರೆಗೆ ದಕ್ಷಿಣ ಉಪ ವಿಭಾಗದಲ್ಲಿ ನಿಷೇಧಾಜ್ಞೆ ಮುಂದುವರಿಸಿದ್ದರು. ಇದೀಗ ಪರಿಸ್ಥಿತಿ ಹತೋಟಿಗೆ ಬಂದ ಹಿನ್ನೆಲೆ ಎಲ್ಲೆಡೆ ನಿಷೇಧಾಜ್ಞೆ ಕೈಬಿಟ್ಟಿದ್ದಾರೆ.

ಹುಬ್ಬಳ್ಳಿ ಗಲಭೆ ಪ್ರಕರಣ ಸಂಬಂಧ ಈವರೆಗೆ 138 ಮಂದಿಯನ್ನು ಬಂಧಿಸಲಾಗಿದೆ. ಕಲಬುರಗಿ ನಂತರ ಗಲಭೆಕೋರರನ್ನು ಬಳ್ಳಾರಿ ಮತ್ತು ಮೈಸೂರು ಜೈಲಿಗೆ ರವಾನೆ‌ ಮಾಡಲಾಗಿದೆ. ಕಳೆದ ಮಂಗಳವಾರ 103 ಆರೋಪಿಗಳನ್ನು ಕಲಬುರಗಿ ಕೇಂದ್ರ‌ ಕಾರಾಗೃಹಕ್ಕೆ ಕಳುಹಿಸಲಾಗಿತ್ತು.

ನಿನ್ನೆ(ಶನಿವಾರ) ಬಳ್ಳಾರಿಗೆ 15 ಹಾಗೂ ಮೈಸೂರಿಗೆ 10 ಮಂದಿ ಆರೋಪಿಗಳನ್ನು ಸ್ಥಳಾಂತರ‌ ಮಾಡಲಾಗಿದೆ. ಮೂವರು ಗಲಭೆಕೋರರು ಪೊಲೀಸ್ ಕಸ್ಟಡಿಯಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. ಬಂಧಿತ ಒಟ್ಟು 138 ಜನರಲ್ಲಿ ಮೂವರನ್ನು ನ್ಯಾಯಾಲಯದ ಅನುಮತಿ ಮೇರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

ಇದನ್ನೂ ಓದಿ;ಹುಬ್ಬಳ್ಳಿ ಗಲಭೆ ಪ್ರಕರಣ: ನಿಷೇಧಾಜ್ಞೆ ಮುಂದುವರೆಸಿ ಹು-ಧಾ ಪೊಲೀಸ್ ಆಯುಕ್ತ ಲಾಬೂರಾಮ್ ಆದೇಶ

ABOUT THE AUTHOR

...view details