ಹುಬ್ಬಳ್ಳಿ :ನಗರದ ದೇಶಪಾಂಡೆ ಫೌಂಡೇಶನ್ ಲೀಡರ್ಸ್ ಎಕ್ಸಲ್ರೇಟಿಂಗ್ ಡೆವಲಪ್ಮೆಂಟ್ ಪ್ರೋಗ್ರಾಮ್ ಅಡಿ ಸೇವ್ ವಾಟರ್ ಚಾಲೆಂಜ್-2020 ಪ್ರಾರಂಭಿಸಲಾಗಿದೆ. ನೀರಿನ ಮೂಲಗಳ ರಕ್ಷಣೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಈ ವಿಶೇಷ ಅಭಿಯಾನ ಹಮ್ಮಿಕೊಂಡಿದೆ.
ಈ ಅಭಿಯಾನದಲ್ಲಿ ಮನೆ ಮನೆಗೂ ಮಳೆ ನೀರು ಕೊಯ್ಲು, ಇಂಗು ಗುಂಡಿ, ಕೊಳವೆ ಬಾವಿಗಳ ಪುನಶ್ಚೇತನದ ಕುರಿತು ಜಾಗೃತಿ ನೀಡುವ ಮೂಲಕ ಸರ್ಕಾರಿ ಶಾಲೆ, ಸಾಮುದಾಯಿಕ ಪ್ರದೇಶಗಳಲ್ಲಿ ಇಂಗು ಗುಂಡಿ ನಿರ್ಮಿಸಿ ಜನರ ಸಹಭಾಗಿತ್ವದಲ್ಲಿ ನೀರಿನ ಸಂರಕ್ಷಣೆಯ ಯೋಜನೆ ರೂಪಿಸಿದೆ.