ಕರ್ನಾಟಕ

karnataka

ETV Bharat / city

ಹು-ಧಾ: ಬಾಣಂತಿಯರಿಗೆ ಸ್ಯಾನಿಟರಿ ಪ್ಯಾಡ್​, ಸ್ಯಾನಿಟೈಸರ್ ವಿತರಣೆ - Former President Mrs. Sunita Hurakadli

ಲಾಕ್​​​ಡೌನ್ ಜಾರಿಯಾಗಿರುವ ಹಿನ್ನೆಲೆ ಅಗತ್ಯವಿದ್ದವರಿಗೆ ಕಿಟ್​ಗಳನ್ನು ನೀಡಲಾಗುತ್ತಿದೆ. ಅವಳಿ ನಗರದ ಕೆಲವು ಕೊಳಚೆ ಪ್ರದೇಶಗಳಲ್ಲಿ ವಾಸಿಸುವ ಬಾಣಂತಿಯರಿಗೆ ಸ್ಯಾನಿಟರಿ ಪ್ಯಾಡ್​​​ ಹಾಗೂ ಸುರಕ್ಷತೆಗಾಗಿ ಸ್ಯಾನಿಟೈಸರ್​​ ವಿತರಿಸಲಾಗಿದೆ.

Sanitary pads and sanitizer distributed in Hubballi-dharwad area
ಹು-ಧಾ: ಕೊಳಚೆ ಪ್ರದೇಶದ ಬಾಣಂತಿಯರಿಗೆ ಸ್ಯಾನಿಟರಿ ಪ್ಯಾಡ್​, ಸ್ಯಾನಿಟೈಸರ್ ವಿತರಣೆ

By

Published : May 23, 2020, 10:57 PM IST

ಹುಬ್ಬಳ್ಳಿ:ಹುಬ್ಬಳ್ಳಿ-ಧಾರವಾಡ ಪೂರ್ವ ಹಾಗೂ ಸೆಂಟ್ರಲ್ ಕ್ಷೇತ್ರದ ವಿವಿಧ ಕೊಳಚೆ ಪ್ರದೇಶಗಳಲ್ಲಿನ ಬಾಣಂತಿಯರು ಹಾಗೂ ಬಡ ಕುಟುಂಬದ ಮಹಿಳೆಯರಿಗೆ ಸ್ಯಾನಿಟರಿ ಪ್ಯಾಡ್ ಹಾಗೂ ಸಾನಿಟೈಸರ್ ವಿತರಿಸಲಾಯಿತು.

ರಾಜ್ಯ ಮಹಿಳಾ ಕಾಂಗ್ರೆಸ್ ಸಹ ಸಂಯೋಜಕಿ ಹಾಗೂ ಮಹಾನಗರ ಜಿಲ್ಲಾ ಮಹಿಳಾ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸುನೀತಾ ಹುರಕಡ್ಲಿ ಅವರ ನೇತೃತ್ವದಲ್ಲಿ ವಿತರಿಸಲಾಯಿತು.

ಹಳೆಹುಬ್ಬಳ್ಳಿಯ ಬಾಣತಿ ಕಟ್ಟಾ, ಬೇರಬಂದ ಓಣಿ, ಗಿರಣಿ ಚಾಳ ಹಾಗೂ ಸುತ್ತಲಿನ ಕೊಳಚೆ ಪ್ರದೇಶಗಳಲ್ಲಿ ಬಾಣಂತಿಯರು ಹಾಗೂ ಬಡ ಕುಟುಂಬದ ಮಹಿಳೆಯರಿಗೆ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ನವೀದ್ ಮುಲ್ಲಾ, ಕಾಂಗ್ರೆಸ್ ಕಾರ್ಯಕರ್ತೆ ಕಾಂಚನಾ ಘಾಟಗೆ, ಕಾಂಗ್ರೆಸ್ ಯುವ ಮುಖಂಡ ಮುಶ್ತಾಕ ಮುದಗಲ್ ಸೇರಿದಂತೆ ‌ಇತರರು ಉಪಸ್ಥಿತರಿದ್ದರು.

ABOUT THE AUTHOR

...view details