ಹುಬ್ಬಳ್ಳಿ: ನಗರದ ಸ್ಯಾಟ್ ಲೈಟ್ ಕಾಂಪ್ಲೆಕ್ಸ್ನಲ್ಲಿರುವ ಸೇಫ್ ಹ್ಯಾಂಡ್ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತದ ವಿರುದ್ಧ ವಂಚನೆ ಆರೋಪ ಕೇಳಿಬಂದಿದೆ. ಪ್ರತಿವಾರ ಮಹಿಳೆಯರಿಂದ ಹಣ ಕಟ್ಟಿಸಿಕೊಂಡು ಇದೀಗ ಇದ್ದಕ್ಕಿದ್ದಂತೆ ಕಚೇರಿಗೆ ಬೀಗ ಹಾಕಲಾಗಿದೆ.
ಸೇಫ್ ಹ್ಯಾಂಡ್ ಸಹಕಾರಿ ಸಂಘದಿಂದ ಮಹಿಳೆಯರಿಗೆ ವಂಚನೆ ಆರೋಪ - Safe Hand Multipurpose Cooperative Society cheating
ಹುಬ್ಬಳ್ಳಿಯ ಸೇಫ್ ಹ್ಯಾಂಡ್ ವಿವಿಧೋದ್ದೇಶಗಳ ಸಹಕಾರ ಸಂಘ ನಿಯಮಿತದ ವಿರುದ್ಧ ಮಹಿಳೆಯರಿಗೆ ವಂಚನೆ ಆರೋಪ ಕೇಳಿಬಂದಿದೆ.
![ಸೇಫ್ ಹ್ಯಾಂಡ್ ಸಹಕಾರಿ ಸಂಘದಿಂದ ಮಹಿಳೆಯರಿಗೆ ವಂಚನೆ ಆರೋಪ Hubli](https://etvbharatimages.akamaized.net/etvbharat/prod-images/768-512-12306796-thumbnail-3x2-sow.jpg)
ಸೇಫ್ ಹ್ಯಾಂಡ್ ಸಹಕಾರಿ ಸಂಘದಿಂದ ಮಹಿಳೆಯರಿಗೆ ವಂಚನೆ ಆರೋಪ
ಸೇಫ್ ಹ್ಯಾಂಡ್ ಸಹಕಾರಿ ಸಂಘದಿಂದ ಮಹಿಳೆಯರಿಗೆ ವಂಚನೆ ಆರೋಪ
ಇದೀಗ ಹಣ ಕಳೆದುಕೊಂಡ ಹಲವಾರು ಮಹಿಳೆಯರು ಸೇಫ್ ಹ್ಯಾಂಡ್ ವಿವಿಧೋದ್ದೇಶಗಳ ಸಹಕಾರ ಸಂಘದ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಧಾರವಾಡ ಜಿಲ್ಲೆಯ ವಿವಿಧ ಗ್ರಾಮಗಳ ಮಹಿಳೆಯರು ಪ್ರತಿ ವಾರವೂ ಹಣ ಕಟ್ಟುತ್ತಿದ್ದರು. ಆದರೆ, ಕಚೇರಿಗೆ ಏಕಾಏಕಿ ಬೀಗ ಹಾಕಿದ್ದು, ಹಣ ಕಟ್ಟಿದ ಮಹಿಳೆಯರಲ್ಲಿ ಆತಂಕ ಸೃಷ್ಟಿಯಾಗಿದೆ.