ಕರ್ನಾಟಕ

karnataka

ETV Bharat / city

15 ದಿನದೊಳಗೆ ದಾಖಲೆ ನೀಡಿ ವಾಹನಗಳನ್ನು ಪಡೆದುಕೊಳ್ಳಿ: ಆರ್​​ಟಿಒ ಸೂಚನೆ - ಹುಬ್ಬಳ್ಳಿ ಲೇಟೆಸ್ಟ್​ ನ್ಯೂಸ್

15 ದಿನದ ಒಳಗಾಗಿ ಗಬ್ಬೂರಿನ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಗೆ ವಾಹನಗಳ ದಾಖಲೆ ಸಲ್ಲಿಸಿ, ಮಾಲೀಕರು ತಮ್ಮ ವಾಹನ ಬಿಡುಗಡೆ ಮಾಡಿಸಿಕೊಂಡು ಹೋಗಬೇಕು. ಇಲ್ಲದಿದ್ದರೆ, ಕಾನೂನಾತ್ಮಕವಾಗಿ ವಿಲೇವಾರಿ ಮಾಡಲಾಗುವುದು ಎಂದು ಧಾರವಾಡ ಪೂರ್ವ ಪ್ರಾದೇಶಿಕ ಸಾರಿಗೆ ಅಧಿಕಾರಿ ಅಪ್ಪಯ್ಯಸ್ವಾಮಿ ನಾಲತ್ವಾಡಮಠ ತಿಳಿಸಿದ್ದಾರೆ.

RTO Notice to Vehicle Owners
15 ದಿನದೊಳಗೆ ದಾಖಲೆ ನೀಡಿ ವಾಹನಗಳನ್ನು ಪಡೆದುಕೊಳ್ಳಿ: ಆರ್​​ಟಿಒ ಸೂಚನೆ

By

Published : Jan 21, 2021, 1:35 PM IST

ಹುಬ್ಬಳ್ಳಿ:ಶಹರದಲ್ಲಿ ದಾಖಲಾತಿ ಇಲ್ಲದ ಕಾರಣ ವಶಪಡಿಸಿಕೊಂಡಿದ್ದ 34 ವಾಹನಗಳನ್ನ ಪ್ರಾದೇಶಿಕ ಸಾರಿಗೆ ಇಲಾಖೆಯ ಗಬ್ಬೂರು ಕಚೇರಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ವಾಹನ ಮಾಲೀಕರಿಗೆ ದಾಖಲೆ ನೀಡಿ ತಮ್ಮ ವಾಹನಗಳನ್ನು ತೆಗೆದುಕೊಂಡು ಹೋಗುವಂತೆ ನೋಟಿಸ್ ನೀಡಲಾಗಿತ್ತು. ಆದರೂ ಕೂಡ 34 ವಾಹನ ಮಾಲೀಕರು ಈವರೆಗೆ ವಾಹನ ತೆಗೆದುಕೊಂಡು ಹೋಗಿಲ್ಲ.

ಈ ಹಿನ್ನೆಲೆಯಲ್ಲಿ 15 ದಿನದ ಒಳಗಾಗಿ ಗಬ್ಬೂರಿನ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಗೆ ದಾಖಲಾತಿ ನೀಡಿ, ವಾಹನ ಬಿಡುಗಡೆ ಮಾಡಿಸಿಕೊಂಡು ಹೋಗಬೇಕು. ಇಲ್ಲದಿದ್ದರೆ, ಕಾನೂನಾತ್ಮಕವಾಗಿ ವಿಲೇವಾರಿ ಮಾಡಲಾಗುವುದು ಎಂದು ಧಾರವಾಡ ಪೂರ್ವ ಪ್ರಾದೇಶಿಕ ಸಾರಿಗೆ ಅಧಿಕಾರಿ ಅಪ್ಪಯ್ಯಸ್ವಾಮಿ ನಾಲತ್ವಾಡಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ABOUT THE AUTHOR

...view details