ಹುಬ್ಬಳ್ಳಿ : ಸ್ಮಾರ್ಟ್ ಸಿಟಿ ಯೋಜನೆ ವಾಣಿಜ್ಯ ನಗರಿಯಲ್ಲಿ ಅವ್ಯವಸ್ಥೆ ತಲೆದೋರುವಂತೆ ಮಾಡಿದೆ. ಇಲ್ಲಿ ಕಾಮಗಾರಿ ಯೋಜನೆಗಳು ಕೇವಲ ಪ್ರಾರಂಭಕ್ಕಷ್ಟೇ, ಮುಕ್ತಾಯವಾಗುವುದಿಲ್ಲ. ಇದರಿಂದ ಇಲ್ಲಿನ ಜನರು ಬೇಸತ್ತು ಹೋಗಿದ್ದಾರೆ.
ಪಟ್ಟಣದ ಈಶ್ವರ ನಗರದಿಂದ ಗಿರಯಾಲಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿ ಪ್ರಾರಂಭವಾಗಿ ಸುಮಾರು 6 ತಿಂಗಳೆ ಕಳೆದು ಹೋಗಿದೆ. ಆದರೆ, ಇಲ್ಲಿಯವರೆಗೂ ಕೂಡಾ ಪೂರ್ಣ ಮಾಡದೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಅಲ್ಲದೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕೂಡಾ ಇತ್ತ ಗಮನ ಕೂಡಾ ಹರಿಸಿಲ್ಲ.