ಕರ್ನಾಟಕ

karnataka

ETV Bharat / city

ಆಕ್ಷೇಪಾರ್ಹ ಪೋಸ್ಟ್​ನಿಂದ ಹುಬ್ಬಳ್ಳಿ ಪ್ರಕ್ಷುಬ್ಧ.. ಪೊಲೀಸ್ ಠಾಣೆ ಮುಂದೆ ಕಲ್ಲು ತೂರಾಟ, ವಾಹನಗಳು ಜಖಂ - stone pelted at hubballi old police station

ಕಿಡಿಗೇಡಿಯೋರ್ವ ಪ್ರಾರ್ಥನಾ ಸ್ಥಳವೊಂದರ ಬಗ್ಗೆ ಆಕ್ಷೇಪಾರ್ಹ ದೃಶ್ಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಹಿನ್ನೆಲೆ ಹುಬ್ಬಳ್ಳಿಯಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಹಳೆ ಹುಬ್ಬಳ್ಳಿ ಠಾಣೆಯ ಆವರಣದಲ್ಲಿ ಕಲ್ಲು ತೂರಾಟ ನಡೆಸಲಾಗಿದೆ.

stone-pelted-at-hubballi-old-police-station
ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆ ಮುಂದೆ ಕಲ್ಲು ತೂರಾಟ: ಪೊಲೀಸ್ ವಾಹನ ಜಖಂ

By

Published : Apr 17, 2022, 7:55 AM IST

Updated : Apr 17, 2022, 9:37 AM IST

ಹುಬ್ಬಳ್ಳಿ : ವಾಣಿಜ್ಯ ನಗರಿಯಲ್ಲಿ ಕಿಡಿಗೇಡಿಯೋರ್ವನ ಕೃತ್ಯದಿಂದ ನಗರದಲ್ಲಿ ರಾತ್ರೋರಾತ್ರಿ ಅಶಾಂತಿ ಉಂಟಾಗಿದೆ. ಪ್ರಾರ್ಥನಾ ಸ್ಥಳವೊಂದರ ಮೇಲೆ ಧ್ವಜವೊಂದನ್ನು ಹಾರಿಸಿದ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಹಿನ್ನೆಲೆಯಲ್ಲಿ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯ ಆವರಣದಲ್ಲಿ ದೊಡ್ಡಮಟ್ಟದ ಗಲಾಟೆ ಆಗಿದ್ದು, ಕಲ್ಲು ತೂರಾಟ ನಡೆಸಲಾಗಿದೆ.

ಧಾರ್ಮಿಕತೆಗೆ ಧಕ್ಕೆ ಉಂಟಾಗುವ ವಿಡಿಯೋ ಪೋಸ್ಟ್ ಮಾಡಿದ್ದು, ಯುವಕನನ್ನು ಪೊಲೀಸರು ಬಂಧಿಸಿ‌ ಠಾಣೆಗೆ ಕರೆ ತಂದಿದ್ದಾರೆ. ಇದರಿಂದ ಆಕ್ರೋಶಗೊಂಡ‌ ಸಾರ್ವಜನಿಕರು ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆ ಎದುರು ಕಲ್ಲು ತೂರಾಟ ನಡೆಸಿದ್ದು, ಘಟನೆಯಲ್ಲಿ ಪೊಲೀಸ್ ವಾಹನಗಳು ಜಖಂಗೊಂಡಿವೆ. ಈಗಾಗಲೇ ಪೊಲೀಸ್ ಠಾಣೆಯಲ್ಲಿ ಹೈ ಅಲರ್ಟ್ ಘೋಷಣೆ ಮಾಡಿದ್ದು, ಹೆಚ್ಚುವರಿ ಪೊಲೀಸ್ ನಿಯೋಜನೆ ಮಾಡಿ ಬಿಗಿ ಬಂದೋಬಸ್ತ್ ಮಾಡಲಾಗಿದೆ.

ಆಕ್ಷೇಪಾರ್ಹ ಪೋಸ್ಟ್​ನಿಂದ ಹುಬ್ಬಳ್ಳಿ ಪ್ರಕ್ಷುಬ್ಧ,ಪೊಲೀಸ್ ಠಾಣೆ ಮುಂದೆ ಕಲ್ಲು ತೂರಾಟ, ವಾಹನಗಳು ಜಖಂ

ಯಾರು ಕೂಡ ಹೊರ ಬರದಂತೆ ಸೂಚನೆ ನೀಡಲಾಗಿದ್ದು, ಹಳೆ ಹುಬ್ಬಳ್ಳಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಏಕಾಏಕಿ ಗಲಾಟೆ ನಡೆದು, ಕಲ್ಲು ತೂರಾಟ ನಡೆಸಿದ್ದು ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಪ್ರಕರಣ ಸಂಬಂಧ ತನಿಖೆ ನಡೆಯುತ್ತಿದ್ದು, ಈಗಾಗಲೇ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಮಧ್ಯೆ ಉದ್ರಿಕ್ತರು ಪೊಲೀಸ್ , ಪೊಲೀಸ್ ವಾಹನದ ಮೇಲೆ ಕಲ್ಲು ತೂರಾಟ ನಡೆಸಿದ್ದು,ಪೊಲೀಸ್ ವಾಹನಗಳು ಜಖಂ ಆಗಿವೆ.

ಪೊಲೀಸರು ಸೇರಿದಂತೆ ಹಲವರಿಗೆ ಗಾಯಗಳಾಗಿದ್ದು, ಉದ್ರಿಕ್ತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಜೊತೆಗೆ ನಗರದೆಲ್ಲೆಡೆ ಶಾಂತಿಯುತವಾಗಿ ವರ್ತಿಸಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದು, ಪರಿಸ್ಥಿತಿ ನಿಯಂತ್ರಿಸಲು ನಗರದಾದ್ಯಂತ 144 ಸೆಕ್ಷನ್​ ಜಾರಿಗೊಳಿಸಲಾಗುವುದು ಎಂದು ಹು-ಧಾ ಅವಳಿ ನಗರ ಪೊಲೀಸ್​ ಆಯುಕ್ತ ಲಾಬೂರಾಮ್​ ಹೇಳಿದ್ದಾರೆ. ಸದ್ಯ ಗಲಭೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಕಲ್ಲು ತೂರಾಟದ ದೃಶ್ಯ ಸಿಸಿಟಿವಿಯಲ್ಲಿ ಸೆರೆ.

ಓದಿ :ಅಶಿಸ್ತು ಸಹಿಸಲ್ಲ, ಕುಟುಂಬ ರಾಜಕಾರಣಕ್ಕೆ ಮಣೆ ಹಾಕಲ್ಲ: ಕಾರ್ಯಕಾರಿಣಿಯಲ್ಲಿ ಹೊಸ ಟಾಸ್ಕ್ ನೀಡಿದ ಸಂತೋಷ್

Last Updated : Apr 17, 2022, 9:37 AM IST

ABOUT THE AUTHOR

...view details