ಹುಬ್ಬಳ್ಳಿ:ನಗರದ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಢಾಣಕಶಿರೂರ ಗ್ರಾಮದ 23 ವರ್ಷದ ಕೊರೊನಾ ಸೋಂಕಿತೆ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ.
ಢಾಣಕಶಿರೂರ ಗ್ರಾಮದ ಕೊರೊನಾ ಸೋಂಕಿತೆ ಆರೋಗ್ಯದಲ್ಲಿ ಚೇತರಿಕೆ - hubli news
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಢಾಣಕಶಿರೂರ ಗ್ರಾಮದ 23 ವರ್ಷದ ಕೊರೊನಾ ಸೋಂಕಿತೆಗೆ ತೀವ್ರತರಹದ ತೊಂದರೆಗಳು ಕಾಣಿಸಿಕೊಂಡ ಹಿನ್ನೆಲೆ, ಶುಕ್ರವಾರ ಹುಬ್ಬಳ್ಳಿಯ ಕಿಮ್ಸ್ನಲ್ಲಿ ವೈದ್ಯರು ಸುರಕ್ಷಿತ ಗರ್ಭಪಾತ ಮಾಡಿಸಿದ್ದರು. ಸದ್ಯ ಸೋಂಕಿತೆ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿರುವುದಾಗಿ ಕಿಮ್ಸ್ನ ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ಸೋಂಕಿತೆಗೆ ತೀವ್ರತರಹದ ತೊಂದರೆಗಳು ಕಾಣಿಸಿಕೊಂಡ ಹಿನ್ನೆಲೆ, ಶುಕ್ರವಾರ ನಗರದ ಕಿಮ್ಸ್ನಲ್ಲಿ ವೈದ್ಯರು ಸುರಕ್ಷಿತ ಗರ್ಭಪಾತ ಮಾಡಿಸಿದ್ದರು. ಸೋಂಕಿತೆ ಗಂಟಲು ಅಲ್ಸರ್,ಮೂತ್ರನಾಳದ ತೊಂದರೆಯಿಂದ ಬಳಲುತ್ತಿದ್ದಳು. ಇದಲ್ಲದೇ ಹಿಮೋಗ್ಲೋಬಿನ್ ಕೊರತೆ, ಸೋಡಿಯಂ ಅಂಶ ಕಡಿಮೆಯಾಗಿತ್ತು. ಹೀಗಾಗಿ ವೈದ್ಯರ ತಂಡ ವೈದ್ಯಕೀಯ ಹೈಪವರ್ ಕಮಿಟಿ ನಿರ್ದೇಶನದಂತೆ ಮೆಡಿಕಲ್ ಟರ್ಮಿನೇಷನ್ ಆಫ್ ಪ್ರೆಗ್ನೆನ್ಸಿ ಮೂಲಕ ಗರ್ಭಪಾತ ಮಾಡಿಸಿತ್ತು. ಇದೀಗ ಸೋಂಕಿತೆ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾಳೆ ಎಂದು ಮೂಲಗಳು ತಿಳಿಸಿವೆ.
ಆರೋಗ್ಯ ಸ್ಥಿತಿ ಗಂಭೀರವಾಗಿರುವವರಿಗೆ ಮಾತ್ರ ಪ್ಲಾಸ್ಮಾ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯಕ್ಕೆ ಸೋಂಕಿತೆಗೆ ಪ್ಲಾಸ್ಮಾ ಚಿಕಿತ್ಸೆ ನೀಡುವ ಅವಶ್ಯಕತೆಯಿಲ್ಲ. ಒಂದು ವೇಳೆ ಅಗತ್ಯ ಬಿದ್ದರೆ ಈಗಾಗಲೇ ಗುಣಮುಖವಾಗಿರುವ ಮುಲ್ಲಾ ಓಣಿಯ ಮಹಿಳೆಯಿಂದ ಪ್ಲಾಸ್ಮಾ ಪಡೆಯುವ ಚಿಂತನೆಯಿದೆ. ಇಬ್ಬರ ರಕ್ತದ ಮಾದರಿ ಹೊಂದಾಣಿಕೆಯಾಗುವುದರಿಂದ ಸಹಕಾರಿಯಾಗಲಿದೆ ಎಂದು ಕಿಮ್ಸ್ನ ಉನ್ನತ ಮೂಲಗಳಿಂದ ತಿಳಿದು ಬಂದಿದೆ.