ಹುಬ್ಬಳ್ಳಿ:ಸಂಪುಟ ವಿಸ್ತರಣೆ ಬೆನ್ನಲ್ಲೆ ಬಿಜೆಪಿಯಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಮಂತ್ರಿ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ಒಂದು ಗುಂಪು ಅಸಮಾಧಾನಗೊಂಡರೆ, ಪಕ್ಷ ತ್ಯಜಿಸಿ ಬಂದು ಸರ್ಕಾರ ರಚನೆಗೆ ಕಾರಣರಾದ ನಮ್ಮನ್ನು ತುಳಿಯಲಾಗುತ್ತಿದೆ ಎಂದು ಮಿತ್ರಮಂಡಳಿ ಕೆಂಡಕಾರುತ್ತಿದೆ.
ಅಸಮಾಧಾನಕ್ಕೆ ಮದ್ದು: ಜಗದೀಶ್ ಶೆಟ್ಟರ್, ರಮೇಶ್ ಜಾರಕಿಹೊಳಿ ಗುಪ್ತ ಮಾತುಕತೆ - Ramesh Zarakiiholi and Jagadish Shettar secret conversation
ಸಚಿವ ಸಂಪುಟ ವಿಸ್ತರಣೆಯ ನಂತರ ಉಂಟಾದ ಅಸಮಾಧಾನಿತರನ್ನು ತಣಿಸುವ ಹೊಣೆಯನ್ನು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹಾಗೂ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೆಗಲಿಗೆ ವಹಿಸಲಾಗಿದೆ ಎನ್ನಲಾಗಿದೆ.
![ಅಸಮಾಧಾನಕ್ಕೆ ಮದ್ದು: ಜಗದೀಶ್ ಶೆಟ್ಟರ್, ರಮೇಶ್ ಜಾರಕಿಹೊಳಿ ಗುಪ್ತ ಮಾತುಕತೆ Ramesh Zarakiiholi and Jagadish Shettar secret conversation in hubli](https://etvbharatimages.akamaized.net/etvbharat/prod-images/768-512-10253278-107-10253278-1610712283580.jpg)
ರಮೇಶ್ ಜಾರಕಿಹೊಳಿ ಮತ್ತು ಜಗದೀಶ್ ಶೆಟ್ಟರ್ ಗುಪ್ತ ಮಾತುಕತೆ
ಬಿಜೆಪಿ ಹೈಕಮಾಂಡ್ ಅಸಮಾಧಾನವನ್ನು ತಣಿಸುವ ಹೊಣೆಯನ್ನು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹಾಗೂ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೆಗಲಿಗೆ ಹಾಕಿದೆ ಎನ್ನಲಾಗಿದೆ. ಇದಕ್ಕಾಗಿ ಇಂದು ಹುಬ್ಬಳ್ಳಿಗೆ ದೌಡಾಯಿಸಿದ ರಮೇಶ ಜಾರಕಿಹೊಳಿ ತರಾತುರಿಯಲ್ಲಿ ಜಗದೀಶ್ ಶೆಟ್ಟರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಜಗದೀಶ್ ಶೆಟ್ಟರ್, ರಮೇಶ್ ಜಾರಕಿಹೊಳಿ ಗುಪ್ತ ಮಾತುಕತೆ
ನಗರದ ಖಾಸಗಿ ಹೋಟೆಲ್ನಲ್ಲಿ ಉಭಯ ಸಚಿವರು ಮಾತುಕತೆ ನಡೆಸಿದರು. ಪಕ್ಷದ ವಿರುದ್ಧ ಬಂಡಾಯ ಎದ್ದಿರುವ ಶಾಸಕರನ್ನು ಮನವೊಲಿಸುವ ಕುರಿತಂತೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದ್ದು, ಇಬ್ಬರ ಭೇಟಿ ಭಾರಿ ಕುತೂಹಲ ಮೂಡಿಸಿದೆ.