ಹುಬ್ಬಳ್ಳಿ :ಸರ್ಕಾರ ಮೈಸೂರಿನಲ್ಲಿ ದೇವಸ್ಥಾನ ತೆರವು ಮಾಡುತ್ತಿರುವುದು ಅತ್ಯಂತ ಹೇಯ ಕೃತ್ಯ. ಇದನ್ನು ನಾನು ಖಂಡಿಸುತ್ತೇನೆ, ವಿರೋಧಿಸುತ್ತೇನೆ ಹಾಗೂ ದೇವಸ್ಥಾನ ತೆರವು ವಿಚಾರದಲ್ಲಿ ತಾರತಮ್ಯ ಬೇಡ. ಎಲ್ಲ ಮತ ಧರ್ಮಗಳ ಮಂದಿರಗಳ ಮೇಲೂ ಕಾನೂನು ಕ್ರಮವಾಗಲಿ ಎಂದು ಬಾಳೆಹೊನ್ನೂರು ರಂಭಾಪುರಿ ಶ್ರೀಗಳು ಹೇಳಿದ್ದಾರೆ.
ದೇವಸ್ಥಾನ ತೆರವು ವಿಚಾರದಲ್ಲಿ ತಾರತಮ್ಯ ಬೇಡ ; ರಂಭಾಪುರಿ ಶ್ರೀ ಅಸಮಾಧಾನ - ಧಾರವಾಡ ಜಿಲ್ಲೆ
ದೇವಾಲಯ ತೆರವು ವಿಚಾರದಲ್ಲಿ ಸರ್ಕಾರ ಸದನದಲ್ಲಿ ಸ್ಪಷ್ಟನೆ ನೀಡಿದೆ. ಅದಕ್ಕೆ ನಮ್ಮ ಸಹಮತ ಸಹ ಇದೆ. ಇನ್ನು ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಬೇಕು..
ದೇವಸ್ಥಾನ ತೆರವು ವಿಚಾರದಲ್ಲಿ ತಾರತಮ್ಯ ಬೇಡ; ರಂಭಾಪುರಿ ಶ್ರೀ ಅಸಮಾಧಾನ
ನಗರದ ವಿದ್ಯಾನಗರದ ರಂಭಾಪುರಿ ಸಮುದಾಯ ಭವನದಲ್ಲಿ ಮಾತನಾಡಿದ ಅವರು, ದೇವಸ್ಥಾನ ಕಲ್ಲಿನ ಹಾಗೂ ಸಿಮೆಂಟಿನ ಕಟ್ಟಡ ಮಾತ್ರ ಅಲ್ಲ, ಭಾವ, ಭಕ್ತಿಯ ಮಂದಿರ. ಯಾವುದೇ ರೀತಿಯ ಸೂಚನೆ ಇಲ್ಲದೇ, ಸಮಾಲೋಚನೆ ಇಲ್ಲದೇ ರಾತ್ರೋರಾತ್ರಿ ದೇವಸ್ಥಾನ ಕೆಡುವುದು ಅತ್ಯಂತ ಖಂಡನೀಯ.
ದೇವಾಲಯ ತೆರವು ವಿಚಾರದಲ್ಲಿ ಸರ್ಕಾರ ಸದನದಲ್ಲಿ ಸ್ಪಷ್ಟನೆ ನೀಡಿದೆ. ಅದಕ್ಕೆ ನಮ್ಮ ಸಹಮತ ಸಹ ಇದೆ. ಇನ್ನು ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಬೇಕು ಎಂದರು.
Last Updated : Sep 25, 2021, 3:40 PM IST