ಧಾರವಾಡ: ಎಸ್‌ಡಿಎಂ ಇಂಜಿನಿಯರಿಂಗ್ ಕಾಲೇಜಿನ 9ನೇ ಪದವಿ ಪ್ರದಾನ ಸಮಾರಂಭ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಎಸ್.ಡಿ.ಎಂ ವಿವಿಯ ಕುಲಪತಿ ಡಾ. ನಿರಂಜನಕುಮಾರ ಅವರು ಪದವಿ ಪ್ರಧಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಧಾರವಾಡ ಎಸ್‌ಡಿಎಂ ಕಾಲೇಜಿನಲ್ಲಿ ಪದವಿ ಪ್ರಧಾನ: ರಾಜಶ್ರೀ ಭಟ್ಗೆ ಚಿನ್ನದ ಪದಕ - undefined
ಇನ್ಪಾರ್ಮೇಷನ್ ಸೈನ್ಸ್ ಆ್ಯಂಡ್ ಎಂಜಿನಿಯರಿಂಗ್ ವಿಭಾಗದಲ್ಲಿ 9.70 ಸಿಜಿಪಿಎ ಅಂಕ ಪಡೆದ ರಾಜಶ್ರೀ ಭಟ್ ಕಾಲೇಜ್‌ಗೆ ಟಾಪರ್ ಆಗಿ ಹೊರಹೊಮ್ಮಿದ್ದು, ಇವರಿಗೆ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ಹೆಸರಿನಲ್ಲಿರುವ ಚಿನ್ನದ ಪದಕವನ್ನು ಪ್ರದಾನ ಮಾಡಲಾಯಿತು.

ರಾಜಶ್ರೀ ಭಟ್ಗೆ ಚಿನ್ನದ ಪದಕ ಪ್ರದಾನ
ಇನ್ಪಾರ್ಮೇಷನ್ ಸೈನ್ಸ್ ಆ್ಯಂಡ್ ಎಂಜಿನಿಯರಿಂಗ್ ವಿಭಾಗದಲ್ಲಿ 9.70 ಸಿಜಿಪಿಎ ಅಂಕ ಪಡೆದ ರಾಜಶ್ರೀ ಭಟ್ ಕಾಲೇಜ್‌ಗೆ ಟಾಪರ್ ಆಗಿದ್ದು, ಇವರಿಗೆ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ಹೆಸರಿನಲ್ಲಿರುವ ಚಿನ್ನದ ಪದಕವನ್ನು ಪ್ರದಾನ ಮಾಡಲಾಯಿತು.
ರಾಜಶ್ರೀ ಭಟ್ಗೆ ಚಿನ್ನದ ಪದಕ ಪ್ರದಾನ
ಈ ಸಾಧನೆ ಮಾಡಿರುವ ರಾಜಶ್ರೀ ಶಿರಸಿಯ ಸಾಮಾನ್ಯ ರೈತನ ಮಗಳಾಗಿದ್ದು, ತಾಯಿ ಸಂಗೀತ ಶಿಕ್ಷಕಿಯಾಗಿದ್ದಾರೆ. ಜೈಪುರ ಎಂಎನ್‌ಐಟಿ ನಿರ್ದೇಶಕ ಡಾ. ಉದಯಕುಮಾರ ಯರಗಟ್ಟಿ, ಸಂಸ್ಥೆ ಕಾರ್ಯದರ್ಶಿ ಜೀವಂಧರ ಕುಮಾರ, ಕಾಲೇಜಿನ ಪ್ರಾಚಾರ್ಯ ಡಾ. ಎಸ್.ಬಿ. ವಣಕುದರೆ ಇತರರು ಭಾಗಿಯಾಗಿದ್ದರು.