ಧಾರವಾಡ: ಗೃಹಿಣಿಯೊಬ್ಬರು ಮಾಡಿದ ಉಪಾಯದಿಂದ ನಡೆಯಬಹುದಾದ ಅನಾಹುತವೊಂದು ತಪ್ಪಿದ ಘಟನೆ ನಗರದ ಕುಂಬಾರ ಓಣಿಯಲ್ಲಿ ನಡೆದಿದೆ.
ಧಾರವಾಡದಲ್ಲಿ ಯುವಕರ ಪ್ರಾಣ ಉಳಿಸಿತು ಗೃಹಿಣಿ ಮಾಡಿದ ಆ ಒಂದು ಉಪಾಯ - ಧಾರವಾಡ ಮಳೆ ಸುದ್ದಿ
ಧಾರವಾಡದ ಕುಂಬಾರ ಓಣಿಯಲ್ಲಿ ಗೃಹಿಣಿವೋರ್ವರು ಮಾಡಿದ ಉಪಾಯ ಯುವಕರ ಪ್ರಾಣ ಉಳಿಸಿದೆ.
ಮನೆ ಕುಸಿತ
ಧಾರವಾಡ ನಗರದ ಕುಂಬಾರ ಓಣಿಯಲ್ಲಿ ಬೀಗ ಹಾಕಿದ ಮನೆಯ ಕಟ್ಟೆ ಮೇಲೆ ಪ್ರತಿನಿತ್ಯ ಮೊಬೈಲ್ ಹಿಡಿದು ಯುವಕರು ಹರಟೆ ಹೊಡೆಯುತ್ತಾ, ಪಬ್ಜಿ ಆಡುತ್ತಿದ್ದರು. ಪಕ್ಕದ ಮನೆಯವರು ಯುವಕರಿಗೆ ಇಲ್ಲಿ ಕೂರಬೇಡಿ ಎಂದು ಬುದ್ದಿ ಸಹ ಹೇಳಿದ್ದರು. ಆದರೆ, ಯುವಕರು ಮಾತನ್ನು ಕೇಳದ ಹಿನ್ನೆಲೆ ಮನೆ ಕಟ್ಟೆ ಮೇಲೆ ಗೃಹಿಣಿಯೊಬ್ಬರು ಡಾಂಬರ್ ಸುರಿದಿದ್ದರು.ನಿನ್ನೆ ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಸುರಿದಿದ್ದು, ಮಳೆಯ ರಭಸಕ್ಕೆ ಮನೆ ನೆಲಸಮವಾಗಿದೆ. ಇದರಿಂದ ನಡೆಯಬಹುದಾಗಿದ್ದ ಅನಾಹುತ ತಪ್ಪಿಸಿದಂತಾಗಿದೆ.