ಕರ್ನಾಟಕ

karnataka

ವರದಿ ನೀಡೋದು ನನ್ನ ಜವಾಬ್ದಾರಿ, ಮುಂದಿನದ್ದು ಪೊಲೀಸ್​​ ಪ್ರಧಾನ ಕಚೇರಿಯದ್ದು: ಔರಾದ್ಕರ್​​​​​

5ನೇ ತಂಡದ ಸಿಪಿಸಿ ಹಾಗೂ 1ನೇ ತಂಡದ ಎಪಿಸಿ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ‌ದಲ್ಲಿ ರಾಘವೇಂದ್ರ ಔರಾದ್ಕರ್​​​​ ಗೌರವ ವಂದನೆ ಸ್ವೀಕರಿಸಿದರು.

By

Published : Nov 30, 2019, 8:36 PM IST

Published : Nov 30, 2019, 8:36 PM IST

ETV Bharat / city

ವರದಿ ನೀಡೋದು ನನ್ನ ಜವಾಬ್ದಾರಿ, ಮುಂದಿನದ್ದು ಪೊಲೀಸ್​​ ಪ್ರಧಾನ ಕಚೇರಿಯದ್ದು: ಔರಾದ್ಕರ್​​​​​

Senior IPS officer Raghavendra Aurarakar
ಹಿರಿಯ ಐಪಿಎಸ್ ಅಧಿಕಾರಿ ರಾಘವೇಂದ್ರ ಔರಾದಕರ್

ಧಾರವಾಡ:ಇಲಾಖೆಯಲ್ಲಿ ಪೊಲೀಸರು ಪ್ರತಿಭಟನೆ ನಡೆಸಲು ಅವಕಾಶವಿಲ್ಲ. ಔರಾದ್ಕರ್​​​ ವರದಿ ಜಾರಿ ಬಂದರೆ ಈಗಿರುವ ಪೊಲೀಸ್ ಸಿಬ್ಬಂದಿ ಬಡ್ತಿ‌‌ ಪಡೆದಾಗ ವೇತನದ ಲಾಭ ಪಡೆಯಲಿದ್ದಾರೆ ಎಂದು ಹಿರಿಯ ಐಪಿಎಸ್ ಅಧಿಕಾರಿ ರಾಘವೇಂದ್ರ ಔರಾದ್ಕರ್​​ ಹೇಳಿದ್ದಾರೆ.

ನಗರದ ಪೊಲೀಸ್ ತರಬೇತಿ ಶಾಲೆಯ ಕವಾಯತು ಮೈದಾನದಲ್ಲಿ ನಡೆದ 5ನೇ ತಂಡದ ಸಿಪಿಸಿ ಹಾಗೂ 1ನೇ ತಂಡದ ಎಪಿಸಿ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ‌ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಔರಾದ್ಕರ್​​​ ವರದಿ ಜಾರಿಗೆ ತರಲು ಪೊಲೀಸರು ಪ್ರತಿಭಟನೆ ನಡೆಸುತ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದರು.

ಹಿರಿಯ ಐಪಿಎಸ್ ಅಧಿಕಾರಿ ರಾಘವೇಂದ್ರ ಔರಾದ್ಕರ್​​

ನಾನು ಸರ್ಕಾರಕ್ಕೆ‌ ವರದಿ ಕೊಟ್ಟಿದ್ದೇನೆ. ಅದನ್ನ ಜಾರಿಗೆ ತರಲು ಕ್ರಮ ಕೈಗೊಳ್ಳಬೇಕಾಗಿರುವುದು ಪೊಲೀಸ್ ಪ್ರಧಾನ ಕಚೇರಿ. ವರದಿ ಜಾರಿಗೆ ತರುವುದು ನನ್ನ ಜವಾಬ್ದಾರಿ ಅಲ್ಲ. ಅದರ ಅಭಿವೃದ್ಧಿ ಪಡಿಸುವುದು ಪ್ರಧಾನ ಕಚೇರಿಯೇ. ಐಪಿಎಸ್ ಅಧಿಕಾರಿಯಾಗಿ ಸರ್ಕಾರದ ಗಮನಕ್ಕೆ ಎಲ್ಲವನ್ನೂ ತರುತ್ತೇನೆ ಎಂದರು.

ಪೊಲೀಸ್ ಕಾನೂನು ಪುಸ್ತಕವನ್ನು ಸರಿಯಾಗಿ ಓದಿಕೊಳ್ಳಿ. ಬರುವ ವೇತನವನ್ನು ದುಂದುವೆಚ್ಚ ಮಾಡಬೇಡಿ. ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು. ಸಾರ್ವಜನಿಕರಿಗೆ ತೊಂದರೆ ನೀಡಬೇಡಿ ಎಂದು ಪ್ರಶಿಕ್ಷಣಾರ್ಥಿಗಳಿಗೆ ಕರೆ ನೀಡಿದರು.

ರಾಘವೇಂದ್ರ ಔರಾದ್ಕರ್​​​​ ಪ್ರಶಿಕ್ಷಣಾರ್ಥಿಗಳಿಂದ ಗೌರವ ವಂದನೆ ಸ್ವೀಕರಿಸಿದರು. 9 ವಿವಿಧ ಘಟಕಗಳಿಂದ ಸಿಪಿಸಿ 268 ಮತ್ತು ಎಪಿಸಿ 105 ಮಂದಿ ತರಬೇತಿ ಪಡೆದುಕೊಂಡಿದ್ದಾರೆ. ಒಳಾಂಗಣ, ಹೋರಾಂಗಣ, ಫೈರಿಂಗ್ ಹಾಗೂ ಸರ್ವೊತ್ತಮ ಪ್ರಶಿಕ್ಷಣಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ABOUT THE AUTHOR

...view details