ಕರ್ನಾಟಕ

karnataka

ETV Bharat / city

ಧಾರವಾಡ: ಕರ್ನಾಟಕ ಕಾಲೇಜಿನ ಗಾರ್ಡನ್​​​ನಲ್ಲಿ 2 ಗುಂಪುಗಳ ನಡುವೆ ಮರಾಮಾರಿ - ಗುಂಪುಗಳ ನಡುವೆ ಮರಾಮಾರಿ

ಧಾರವಾಡದ ಕರ್ನಾಟಕ ಕಾಲೇಜಿನ ಮುಂಭಾಗದಲ್ಲಿರುವ ಗಾರ್ಡನ್​​​ನಲ್ಲಿ ಎರಡು ಗುಂಪಿನ ಯುವಕರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ.‌‌ ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

Quarrel between groups at Karnataka College Garden
ಕರ್ನಾಟಕ ಕಾಲೇಜಿನ ಗಾರ್ಡನ್​​​ನಲ್ಲಿ 2 ಗುಂಪುಗಳ ನಡುವೆ ಮರಾಮಾರಿ

By

Published : Dec 2, 2021, 2:58 PM IST

ಧಾರವಾಡ:ಕಳೆದ ಎರಡು ದಿನಗಳ ಹಿಂದೆ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಮಾರಾಮಾರಿ ಘಟನೆ ಮಾಸುವ ಮುನ್ನವೇ ಕರ್ನಾಟಕ ಕಾಲೇಜಿನ ಮುಂಭಾಗದಲ್ಲಿರುವ ಗಾರ್ಡನ್​​​ನಲ್ಲಿ ಎರಡು ಗುಂಪಿನ ಯುವಕರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ.‌‌

ಕರ್ನಾಟಕ ಕಾಲೇಜಿನ ಗಾರ್ಡನ್​​​ನಲ್ಲಿ 2 ಗುಂಪುಗಳ ನಡುವೆ ಮರಾಮಾರಿ

ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಯುವಕರ ಬೀದಿ ಕಾಳಗ ಮುಂದುವರಿದಿದ್ದು, ವಿವಿಧ ಕಾಲೇಜಿನ ವಿದ್ಯಾರ್ಥಿಗಳಾಗಿರಬಹುದು ಎಂದು ಅಂದಾಜಿಸಲಾಗಿದೆ. ಹೊಡೆದಾಟ ನಡೆಯುತ್ತಿದ್ದ ವೇಳೆ ಮಾಧ್ಯಮದ ಕ್ಯಾಮೆರಾ ನೋಡಿದ ಯುವಕರು ಓಡಿ ಹೋಗಿದ್ದಾರೆ. ಸದ್ಯ ಧಾರವಾಡದಲ್ಲಿ‌ ಪುಂಡ ರೌಡಿಗಳ ಹಾವಳಿ ಹೆಚ್ಚಾಯ್ತಾ? ಎಂಬ ಪ್ರಶ್ನೆ ಉದ್ಭವಿಸಿದೆ. ಈ ಬಗ್ಗೆ ಪೊಲೀಸ್ ಇಲಾಖೆ ಯಾವ ರೀತಿ ಕ್ರಮ ಕೈಗೊಳ್ಳಲಿದೆ ಎಂಬುದನ್ನ ಕಾದು ನೋಡಬೇಕಿದೆ.

ಇದನ್ನೂ ಓದಿ:ಚಾಮರಾಜನಗರ: ಟಿಪ್ಪರ್-ಬಸ್ ಮುಖಾಮುಖಿ ಡಿಕ್ಕಿ, 6 ಮಂದಿಗೆ ಗಾಯ

ABOUT THE AUTHOR

...view details