ಹುಬ್ಬಳ್ಳಿ:ಕೊರೊನಾ ವೈರಸ್ ನಿಯಂತ್ರಿಸುವ ಉದ್ದೇಶದಿಂದ ಹಾಗೂ ಕ್ವಾರಂಟೈನ್ಗಾಗಿ ಧಾರವಾಡ ಜಿಲ್ಲಾಡಳಿತ ಹುಬ್ಬಳ್ಳಿ ಅಯೋಧ್ಯೆ ಹೋಟೆಲ್ ಅನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿದೆ.
ಹೋಟೆಲ್‌ನಲ್ಲಿ ಕ್ವಾರಂಟೈನ್ ವ್ಯವಸ್ಥೆ ಕಲ್ಪಿಸಿದ ಜಿಲ್ಲಾಡಳಿತ - Quarantine System in hotel at Dharawad
ಹೋಮ್ ಕ್ವಾರಂಟೈನ್ ಇರುವ ಒಬ್ಬೊಬರ ಮೇಲೆ ನಿಗಾವಹಿಸಲು ಕಷ್ಟವಾಗುತ್ತಿದೆ. ಎಲ್ಲರೂ ಒಂದೆಡೆ ಇದ್ದರೆ ಎಲ್ಲಾ ರೀತಿಯ ತಪಾಸಣೆಗೂ ಅನುಕೂಲವಾಗಲಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಅಯ್ಯೋಧ್ಯೆ ಹೋಟೆಲ್
ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿ ಜರುಗಿದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಮರಳಿ ಬಂದ 50 ಮಂದಿಯನ್ನೂ ಹೋಟೆಲ್ಗೆ ಸ್ಥಳಾಂತರಿಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿತ್ತು.
ತಹಶೀಲ್ದಾರ್ ಶಶಿಧರ್ ಮಾಡ್ಯಾಳ್ ಹಾಗೂ ಆರೋಗ್ಯ ಅಧಿಕಾರಿ ಡಾ.ಬಿರಾದಾರ ನೇತೃತ್ವದಲ್ಲಿ ಹೋಟೆಲ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ.