ಕರ್ನಾಟಕ

karnataka

ETV Bharat / city

ಗ್ರಾ.ಪಂ. ಉಪಚುನಾವಣೆ.. ಡಿ.25 ರಿಂದ 27 ರವರೆಗೆ ಮದ್ಯ ಮಾರಾಟ ನಿಷೇಧಿಸಿದ ಧಾರವಾಡ ಡಿಸಿ - ಜಿಲ್ಲಾಧಿಕಾರಿ ನಿತೇಶ ಕೆ. ಪಾಟೀಲ

ಮತದಾನ ನಡೆಯುವ ಪ್ರದೇಶ ವ್ಯಾಪ್ತಿಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಡಿ.25 ರಿಂದ ಡಿ.27ರ ವರೆಗೆ ಮದ್ಯದ ಅಂಗಡಿ, ಬಾರ್​​ಗಳನ್ನು ಬಂದ್ ಮಾಡಲು ಜಿಲ್ಲಾಧಿಕಾರಿ ನಿತೇಶ ಕೆ. ಪಾಟೀಲ ಆದೇಶ ಹೊರಡಿಸಿದ್ದಾರೆ.

Dharwad DC
ಜಿಲ್ಲಾಧಿಕಾರಿ ನಿತೇಶ ಪಾಟೀಲ

By

Published : Dec 23, 2021, 1:40 PM IST

ಧಾರವಾಡ: ಜಿಲ್ಲೆಯ ವಿವಿಧ ತಾಲೂಕುಗಳ 6 ಗ್ರಾಮ ಪಂಚಾಯತ್​ಗಳಲ್ಲಿ ಸಾರ್ವತ್ರಿಕ ಚುನಾವಣೆ ಹಾಗೂ 9 ಗ್ರಾಮ ಪಂಚಾಯತ್​ಗಳಲ್ಲಿ ಖಾಲಿಯಿರುವ ಸ್ಥಾನಗಳಿಗೆ ಡಿ. 27 ರಂದು ಉಪಚುನಾವಣೆ ಜರುಗಲಿದೆ.

ಹೀಗಾಗಿ ಡಿ.25 ರ ಮಧ್ಯರಾತ್ರಿ 11.59 ರಿಂದ ಡಿ.27ರ ಮಧ್ಯರಾತ್ರಿ 11.59 ರವರೆಗೆ ಮತದಾನ ನಡೆಯಲಿರುವ ಒಟ್ಟು 15 ಗ್ರಾಮ ಪಂಚಾಯತ್​ ವ್ಯಾಪ್ತಿಗಳಲ್ಲಿ ಮದ್ಯದ ಅಂಗಡಿ, ಬಾರ್​​ಗಳನ್ನು ಬಂದ್ ಮಾಡಲು ಮತ್ತು ಎಲ್ಲ ರೀತಿಯ ಮದ್ಯ ತಯಾರಿಕಾ ಘಟಕಗಳು, ಮದ್ಯ ಸಾಗಣೆ, ಸಂಗ್ರಹಣೆಯನ್ನು ನಿಷೇಧಿಸಿ ಹಾಗೂ ಮಾರಾಟ ಮಳಿಗೆಗಳನ್ನು ಮುಚ್ಚಲು ಜಿಲ್ಲಾಧಿಕಾರಿ ನಿತೇಶ ಕೆ. ಪಾಟೀಲ ಆದೇಶ ಹೊರಡಿಸಿದ್ದಾರೆ.

ಪ್ರಜಾ ಪ್ರತಿನಿಧಿ ಕಾಯ್ದೆ 1951 ಕಲಂ 135 (ಸಿ) ಅನ್ವಯ ಪ್ರದತ್ತವಾದ ಅಧಿಕಾರ ಚಲಾಯಿಸಿ, ಈ ಆದೇಶ ಹೊರಡಿಸಲಾಗಿದೆ. ಅಬಕಾರಿ ಉಪ ಆಯುಕ್ತರು, ಉಪ ಅಧೀಕ್ಷಕರು ಹಾಗೂ ವಿಚಕ್ಷಕದಳದ ಅಧಿಕಾರಿಗಳಿಗೆ ಈ ಆದೇಶ ಜಾರಿಗೊಳಿಸಲು ಡಿಸಿ ಸೂಚಿಸಿದ್ದಾರೆ.

ಮತದಾನ ನಡೆಯುವ ಪ್ರದೇಶ ವ್ಯಾಪ್ತಿಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ಡಿ.27 ರಂದು ಒಟ್ಟು 15 ಗ್ರಾಮ ಪಂಚಾಯತ್​ ವ್ಯಾಪ್ತಿಗಳಲ್ಲಿ ಜರುಗಲಿರುವ ಸಂತೆ, ಜಾತ್ರೆ ಮತ್ತು ಉತ್ಸವಗಳನ್ನು ನಿಷೇಧಿಸಲಾಗಿದೆ ಎಂದು ಡಿಸಿ ನಿತೇಶ ಪಾಟೀಲ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ:ಚಿಕ್ಕಬಳ್ಳಾಪುರದಲ್ಲಿ ಕಿಡಿಗೇಡಿಗಳಿಂದ ಸಂತ ಆಂಟೋನಿ ವಿಗ್ರಹಕ್ಕೆ ಹಾನಿ

ABOUT THE AUTHOR

...view details