ಹುಬ್ಬಳ್ಳಿ:ನಗರದ ಕೊಳಚೆ ಪ್ರದೇಶದ ನಿವಾಸಿಗಳಿಗೆ ಕೆಎಂಎಫ್ ವತಿಯಿಂದ ಹಮ್ಮಿಕೊಂಡಿದ್ದ ಉಚಿತ ಹಾಲು ವಿತರಣೆ ಕಾರ್ಯಕ್ರಮದಲ್ಲಿ ಶಾಸಕ ಪ್ರಸಾದ್ ಅಬ್ಬಯ್ಯ ಭಾಗಿಯಾಗಿದ್ದರು.
ಕೊಳಚೆ ನಿವಾಸಿಗಳಿಗೆ ಉಚಿತ ಹಾಲು ವಿತರಿಸಿದ ಶಾಸಕ ಪ್ರಸಾದ್ ಅಬ್ಬಯ್ಯ - ಉಚಿತ ಹಾಲು ವಿತರಿಸಿದ ಶಾಸಕ ಪ್ರಸಾದ್ ಅಬ್ಬಯ್ಯ
ಕೆಎಂಎಫ್ ಹಮ್ಮಿಕೊಂಡಿದ್ದ ಉಚಿತ ಹಾಲು ವಿತರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ, ನಗರದ ಕೊಳಚೆ ನಿವಾಸಿಗಳಿಗೆ ಸರ್ಕಾರದ ಆದೇಶ ಪಾಲಿಸಿ ಮನೆಯಲ್ಲಿಯೇ ಇರಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡ ಶಾಸಕ ಪ್ರಸಾದ್ ಅಬ್ಬಯ್ಯ.
![ಕೊಳಚೆ ನಿವಾಸಿಗಳಿಗೆ ಉಚಿತ ಹಾಲು ವಿತರಿಸಿದ ಶಾಸಕ ಪ್ರಸಾದ್ ಅಬ್ಬಯ್ಯ Prasad Abhayya MLA distributes free milk to slum dwellers](https://etvbharatimages.akamaized.net/etvbharat/prod-images/768-512-6649026-331-6649026-1585931894021.jpg)
ಹು-ಧಾ ಪೂರ್ವ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೊಳಚೆ ಪ್ರದೇಶಗಳಾದ ನೇಕಾರ ನಗರದ ಧಾರವಾಡ ಪ್ಲಾಟ್, ಟಿಪ್ಪು ನಗರ, ಜನ್ನತ ನಗರ, ಕೃಷ್ಣಾಪುರ ಓಣಿ, ಶಿಕ್ಕಲಗಾರ ತಾಂಡ, ಸದರಸೋಫಾ, ನಾರಾಯಣ ಸೋಫಾ, ಮೇದಾರ ಓಣಿ ಸೇರಿದಂತೆ ಮುಂತಾದ ಕಡೆಗಳಲ್ಲಿ ಒಟ್ಟು 1800 ಮನೆಗಳಿಗೆ ಉಚಿತ ಹಾಲು ವಿತರಿಸಲಾಯಿತು.
ಮಹಾಮಾರಿ ಕೊರೊನಾ ಬಗ್ಗೆ ಜನರು ಅನಗತ್ಯವಾಗಿ ಆತಂಕ ಪಡದೆ ಜಾಗೃತರಾಗಿ, ಸರ್ಕಾರದ ಆದೇಶ ಪಾಲಿಸಿ ಮನೆಯಲ್ಲೇ ಇರಬೇಕು. ಅನಗತ್ಯವಾಗಿ ಹೊರಗಡೆ ಸಂಚರಿಸದೇ ಶುಚಿತ್ವದೊಂದಿಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಮೂಲಕ ಕೊರೊನಾ ವೈರಸ್ ಹರಡುವಿಕೆ ತಡೆಗೆ ಎಲ್ಲರೂ ಕೈಜೋಡಿಸಬೇಕು ಎಂದು ಶಾಸಕ ಪ್ರಸಾದ್ ಅಬ್ಬಯ್ಯ ಮನವಿ ಮಾಡಿದರು.