ಹುಬ್ಬಳ್ಳಿ(ಧಾರವಾಡ) :ಲವ್ ಜಿಹಾದ್ಗೆ ಉತ್ತಮ ಉದಾಹರಣೆ ಗದಗ ಜಿಲ್ಲೆಯ ಅಪೂರ್ವಾ ಪ್ರಕರಣ. ಅಪೂರ್ವ ಎಂಬ 19 ವರ್ಷದ ಹೆಣ್ಣು ಮಗಳನ್ನು ಮತಾಂತರ ಮಾಡಿದ್ದಾರೆ. ಮದುವೆಯಾಗಿದ್ರೂ ಈಕೆಯನ್ನು ಪ್ರೀತಿಸಿ ಮದುವೆಯಾಗಿ ಈಗ ಕೊಲೆ ಯತ್ನ ನಡೆಸಿದ ಪತಿ ಇಜಾಜ್ ಶಿರೂರ ಮೇಲೆ ಕಠಿಣ ಕ್ರಮ ಆಗಬೇಕು ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು.
ಗದಗ ಅರ್ಪೂವಾ ಪ್ರಕರಣ - ಪ್ರಮೋದ್ ಮುತಾಲಿಕ್ ಪ್ರತಿಕ್ರಿಯೆ ನೀಡಿರುವುದು.. ಹುಬ್ಬಳ್ಳಿಯಲ್ಲಿ ಸುಚಿರಾಯು ಆಸ್ಪತ್ರೆಗೆ ಪ್ರಮೋದ್ ಮುತಾಲಿಕ್ ಭೇಟಿ ನೀಡಿ ಅಪೂರ್ವಳ ಆರೋಗ್ಯ ವಿಚಾರಿಸಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ನಂತರ ಮಾತನಾಡಿದ ಅವರು, ಹದಿ ಹರೆಯದ ಹೆಣ್ಣು ಮಕ್ಕಳು ಪ್ರೀತಿಯಲ್ಲಿ ಬೀಳೋ ಮುಂಚೆ ಅರ್ಪೂವ ಘಟನೆ ನೆನಪಿಸಿಕೊಳ್ಳಬೇಕು.
ಪೊಲೀಸರು ಆರೋಪಿಯನ್ನು ಒಂದು ದಿನದಲ್ಲಿ ಬಂಧಿಸಿದ್ದಾರೆ. ಆದ್ರೆ, ಡಮ್ಮಿ ಕೇಸ್ ಹಾಕಿ ಆತನನ್ನು ಬಿಡಬಾರದು. ಆ ಮನೆಯನ್ನು ಮೌಲ್ವಿಗಳು ಬಹಿಷ್ಕಾರ ಹಾಕಬೇಕು ಎಂದರು.
ಇದನ್ನೂ ಓದಿ:4 ವರ್ಷದ ಹಿಂದೆ ಪ್ರೀತಿಸಿ ಮದುವೆ.. ಗದಗದಲ್ಲಿ ಸ್ಕೂಟಿ ಕಲಿಯುತ್ತಿದ್ದ ಪತ್ನಿ ಮೇಲೆ ಪತಿಯಿಂದ ಮಾರಣಾಂತಿಕ ಹಲ್ಲೆ!
ಹಿನ್ನೆಲೆ :ಗಂಡನೇ ಹೆಂಡತಿಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲು ಯತ್ನಿಸಿದ್ದ ಘಟನೆ ಗದಗ ನಗರದ ರಿಂಗ್ ರಸ್ತೆಯಲ್ಲಿರುವ ಲಯನ್ಸ್ ಶಾಲೆಯ ಮೈದಾನದಲ್ಲಿ ನಿನ್ನೆ ಬೆಳಗ್ಗೆ ನಡೆದಿತ್ತು. ಗದಗ ನಿವಾಸಿ ಅಪೂರ್ವಾ ಅವರ ಮೇಲೆ ಪತಿ ಇಜಾಜ್ ಹಲ್ಲೆ ಮಾಡಿದ್ದಾರೆನ್ನುವ ಆರೋಪವಿದ್ದು, ಅಪೂರ್ವಾ ಅವರ ಚಿಕಿತ್ಸೆ ಮುಂದುವರಿದಿದೆ.