ಧಾರವಾಡ: ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ವಿವಾದ ಹಿನ್ನೆಲೆ ಹಿಂದೂಪರ ಮುಖಂಡರಿಂದ ಸ್ಫೋಟಕ ಸಾಕ್ಷ್ಯ ಬಹಿರಂಗವಾಗಿದೆ. ಜಾಮಿಯಾ ಮಸೀದಿ ಪ್ರದೇಶದಲ್ಲಿ ಹಿಂದೆ ದೇವಸ್ಥಾನವಿತ್ತು ಎಂಬುದು ಗೊತ್ತಾಗಿದೆ. ಮಸೀದಿಯಲ್ಲಿ ಸಿಕ್ಕ ಪುಸ್ತಕದಲ್ಲಿ ದೇವಸ್ಥಾನವಿರುವುದು ತಿಳಿದು ಬಂದಿದೆ ಅಂತ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಜಾಮಿಯಾ ಮಸೀದಿಯಲ್ಲಿ ನಾಗರ , ಕಲ್ಯಾಣಿ, ಗರುಡ ಚಿಹ್ನೆ ಇದೆ. ಇದರ ಜೊತೆಗೆ ಟಿಪ್ಪು ಸುಲ್ತಾನನೇ ಅದನ್ನು ಕೆಡವಿದ್ದು ಅನ್ನೋದಕ್ಕೆ ಮತ್ತೊಂದು ಪೂರಕ ದಾಖಲೆ ಸಿಕ್ಕಿದೆ. ಅದು 70 ವರ್ಷದ ಹಿಂದೆ ಪ್ರಕಟವಾದ ಪುಸ್ತಕ. ಅದರಲ್ಲಿ ಎಲ್ಲವೂ ಕೂಡ ದಾಖಲಾಗಿದೆ. ನಾರಾಯಣನ ಮೂರ್ತಿ ಕತ್ತರಿಸಿ ಅದನ್ನು ನೀರಿನ ಗುಂಡಿಯಲ್ಲಿ ಎಸೆದಿದ್ದಾರೆ. ಅಲ್ಲದೇ, ಆ ಪುಸ್ತಕದಲ್ಲಿ ಆಂಜನೇಯನ ದೇವಸ್ಥಾನದ ಚಿತ್ರವಿದೆ. ಸರ್ಕಾರಕ್ಕೆ ಮತ್ತೆ ಯಾವ ದಾಖಲೆ ಬೇಕು ಎಂದು ಪ್ರಶ್ನಿಸಿದ್ದಾರೆ.