ಹುಬ್ಬಳ್ಳಿ: ಮಹಾನಗರ ಪಾಲಿಕೆ ಚುನಾವಣೆಗೆ ಉತ್ತಮ ಪ್ರಜಾಕೀಯ ಪಕ್ಷ ಈಗಾಗಲೇ ಭರ್ಜರಿ ಸಿದ್ದತೆ ಮಾಡಿಕೊಂಡಿದ್ದು, ಅಭ್ಯರ್ಥಿಗಳ ಹುಡುಕಾಟಕ್ಕೆ ಹೊಸ ತಂತ್ರವನ್ನು ರೂಪಿಸಿದೆ.
ಹು-ಧಾ ಮಹಾನಗರ ಪಾಲಿಕೆ ಚುನಾವಣೆ ಕುರಿತು ಸುದ್ದಿಗೋಷ್ಠಿ ಮುಂಬರುವ ಹು-ಧಾ ಮಹಾನಗರ ಪಾಲಿಕೆ ಚುನಾವಣೆಗೆ ಸ್ಪರ್ಧೆ ಮಾಡುವ ಆಸಕ್ತ, ಪ್ರಾಮಾಣಿಕ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಉತ್ತಮ ಪ್ರಜಾಕೀಯ ಪಕ್ಷದ ನಾಯಕ ಸಂತೋಷ್ ನಂದೂರ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅವಳಿನಗರದ 82 ವಾರ್ಡ್ಗಳಿಗೆ ಪಾಲಿಕೆ ಚುನಾವಣೆ ನಡೆಯುತ್ತಿದ್ದು, ಪ್ರಜಾಕೀಯ ಪಕ್ಷ ಕೂಡ ಸ್ಪರ್ಧೆ ಮಾಡುತ್ತಿದೆ. ಸ್ಪರ್ಧೆ ಮಾಡಲು ಬಯಸುವ ಅಭ್ಯರ್ಥಿ ಈ ಕ್ಷೇತ್ರದ ಬಗ್ಗೆ ತಿಳುವಳಿಕೆ ಹೊಂದಿರಬೇಕು. ಇದರೊಂದಿಗೆ ಪ್ರಾಮಾಣಿಕವಾಗಿ ಸಮಾಜದ ಜನರ ಅಭಿವೃದ್ಧಿಗೆ ಸ್ಥಿರವಾಗಿ ಕೆಲಸ ಮಾಡುವಂತಿರಬೇಕು ಎಂದರು.
ಚುನಾವಣೆಗೆ ಸ್ಪರ್ಧೆ ಮಾಡುವ ಅಭ್ಯರ್ಥಿಗಳನ್ನು ಮೊದಲು ಪರೀಕ್ಷೆ, ನಂತರ ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಜೊತೆಗೆ ಪ್ರಜಾಕೀಯ ಪಕ್ಷದ ನೀತಿ ನಿಯಮಗಳಿಗೆ ಬದ್ಧವಾಗಿರಬೇಕು. ಆಸಕ್ತರು ತಮ್ಮ ವಿವರದೊಂದಿಗೆ ಜುಲೈ 15ರೊಳಗೆ ಅರ್ಜಿ ಸಲ್ಲಿಸಬೇಕು. ಮಾಹಿತಿಗೆ 7760923126, 7899930201ಗೆ ಸಂಪರ್ಕಿಸಬಹುದು ಎಂದು ಸಂತೋಷ್ ನಂದೂರ ಹೇಳಿದರು.ಈ ವೇಳೆ ಪತ್ರಿಕಾಗೋಷ್ಠಿಯಲ್ಲಿ ಡಿ ಕೆ ಶಿವನಗೌಡ, ಡಾ. ಎನ್ ಸಿ ಪಾಟೀಲ್ ಮುಂತಾದವರು ಉಪಸ್ಥಿತರಿದ್ದರು.