ಕರ್ನಾಟಕ

karnataka

ETV Bharat / city

50 ವರ್ಷದಿಂದ ಇದೇ ರೀತಿ ಆಗುತ್ತಿದೆ.. ನಮ್ಮ ಕನ್ನಡ ಮಾತೆ ರಕ್ಷಣೆ ನಮಗೆ ಗೊತ್ತಿದೆ : ಸಚಿವ ಪ್ರಭು ಚೌಹಾಣ್ - ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್

Minister Prabhu Chauhan reaction on anti cow slaughtering act : ರಾಜ್ಯ ಸರ್ಕಾರ ಕನ್ನಡಿಗರು ಹಾಗೂ ಕನ್ನಡ ಭಾಷೆ ರಕ್ಷಣೆಗೆ ಬದ್ಧವಾಗಿದೆ ಎಂದು ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್ ಹೇಳಿದರು..

ಪ್ರಭು ಚವ್ಹಾಣ್  , Prabhu Chauhan
ಪ್ರಭು ಚವ್ಹಾಣ್

By

Published : Dec 19, 2021, 2:54 PM IST

ಹುಬ್ಬಳ್ಳಿ: ಕನ್ನಡಿಗರು ಹಾಗೂ ಕನ್ನಡ ಭಾಷೆ ರಕ್ಷಣೆಗೆ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್ ಹೇಳಿದರು.

ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಮಠ ಹಾಗೂ ಗೋಶಾಲೆಗೆ ಭೇಟಿ ನೀಡಿ ಬಳಿಕ ಮಾತನಾಡಿದ ಅವರು, ಬೆಳಗಾವಿಯಲ್ಲಿ ಎಂಇಎಸ್ ಗುಂಡಾ ವರ್ತನೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕನ್ನಡಿಗರು ಹಾಗೂ ಕನ್ನಡ ಭಾಷೆ ರಕ್ಷಣೆಗೆ ಬದ್ಧವಾಗಿದೆ.

ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಮಠಕ್ಕೆ ಭೇಟಿ ನೀಡಿದ ಸಚಿವ ಪ್ರಭು ಚೌಹಾಣ್

ಎಂಇಎಸ್ ಬ್ಯಾನ್ ಮಾಡುವ ಬಗ್ಗೆ ಈಗಾಗಲೇ ಚರ್ಚೆಗಳು ನಡೆಯುತ್ತಿವೆ. ಸರ್ಕಾರ ತೀರ್ಮಾನ ಕೈಗೊಳ್ಳಲಿದೆ. ಈ ಕುರಿತು ಹಿಂದೆಯೂ ಚರ್ಚೆಯಾಗಿತ್ತು. ಈಗಲೂ ಸದನದಲ್ಲಿ ಚರ್ಚೆ ನಡೆಯುತ್ತಿದೆ ಎಂದರು.

ಪ್ರಭು ಚೌಹಾಣ್

ರಾಜ್ಯದಲ್ಲಿ ಪ್ರತಿ ಜಿಲ್ಲೆಯಲ್ಲಿರುವ ಗೋಮಾಳ ಜಾಗದಲ್ಲಿ ಗೋಶಾಲೆಗಳನ್ನ ತೆರೆಯಲು ಸೂಚಿಸಲಾಗಿದೆ. ಈ ನಿಟ್ಟಿನಲ್ಲಿ ಗೋಮಾಳ ಜಾಗಗಳನ್ನೂ ಸಹ ನಿಗದಿಪಡಿಸಲಾಗಿದೆ. ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಾದ ನಂತರ ಸಾವಿರಾರು ಗೋವುಗಳನ್ನ ರಕ್ಷಣೆ ಮಾಡಲಾಗಿದೆ.

ಕಸಾಯಿಖಾನೆಯಲ್ಲಿ ಗೋವುಗಳ ಹತ್ಯೆ ವಿಚಾರದ ಕುರಿತು ಅನೇಕರು ಪಿಐಎಲ್ ‌ಮೊರೆ ಹೋಗಿದ್ದಾರೆ. ಆದರೆ, ನಮ್ಮ ಪರವಾಗಿ ತೀರ್ಪು ಬರುವ ನಿರೀಕ್ಷೆ ಇದೆ. ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯನ್ನ ಇನ್ನಷ್ಟು ಬಿಗಿಗೊಳಿಸಲಾಗುವುದು ಎಂದರು.

50 ವರ್ಷದಿಂದ ಇದೇ ರೀತಿ ಆಗುತ್ತಿದೆ :ಬೆಳಗಾವಿ ಘಟನೆ ಬಗ್ಗೆ ಮಾತನಾಡಿದ ಅವರು, 50 ವರ್ಷದಿಂದ ಇದೇ ರೀತಿ ಆಗುತ್ತಿದೆ. ನಮ್ಮ ಕನ್ನಡ ಮಾತೆಯನ್ನು ರಕ್ಷಣೆ ಮಾಡುವುದು ನಮಗೆ ಗೊತ್ತಿದೆ. ನಾವು ಅದನ್ನು ಮಾಡುತ್ತೇವೆ ಎಂದ ಅವರು, ಎಂಇಎಸ್​ ಬಗ್ಗೆ ಉತ್ತರಿಸಿ ಅದನ್ನು ಬ್ಯಾನ್​ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದರು.

ಮಹಾರಾಷ್ಟ್ರದಲ್ಲಿ ಗಡಿ ಉಸ್ತುವಾರಿ ಸಚಿವರಿದ್ದಾರೆ. ಆದರೆ, ನಮ್ಮಲ್ಲಿ ಇದ್ಯಾವುದೂ ಇಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಸಹ ಬಾರ್ಡರ್​ನವನು. ಆದರೆ, ನನಗೆ ಈ ರಾಜ್ಯ ಮುಖ್ಯ ಎಂದು ಹೇಳಿದರು.

ABOUT THE AUTHOR

...view details