ಕರ್ನಾಟಕ

karnataka

ETV Bharat / city

ಪಿಎಂ ಮೋದಿ ದೀರ್ಘಾಯಸ್ಸಿಗೆ ಪ್ರಾರ್ಥಿಸಿ ಹುಬ್ಬಳ್ಳಿಯ ಈಶ್ವರ ದೇವಸ್ಥಾನದಲ್ಲಿ ಹೋಮ-ಹವನ - pooja for wellness of pm modi

ಮೋದಿ ಅವರ ದೀರ್ಘಾಯಸ್ಸಿಗೆ ಪ್ರಾರ್ಥಿಸಿ ಜಯನಗರದ ಈಶ್ವರ ದೇವಸ್ಥಾನದಲ್ಲಿ ಹುಬ್ಬಳ್ಳಿ-ಧಾರವಾಡ ಕೇಂದ್ರ ಮಹಿಳಾ ಮೋರ್ಚಾ ವತಿಯಿಂದ ಹೋಮ-ಹವನ ನಡೆಸಲಾಯಿತು..

pooja for wellness of pm modi at hubli
ಪಿಎಂ ಮೋದಿ ದೀರ್ಘಾಯಸ್ಸಿಗೆ ಪ್ರಾರ್ಥಿಸಿ ಹುಬ್ಬಳ್ಳಿಯಲ್ಲಿ ಪೂಜೆ

By

Published : Jan 7, 2022, 4:27 PM IST

ಹುಬ್ಬಳ್ಳಿ (ಧಾರವಾಡ) :ಪಂಜಾಬ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭದ್ರತಾ ಲೋಪ ಉಂಟಾದ ಹಿನ್ನೆಲೆ ಮೋದಿ ಅವರ ದೀರ್ಘಾಯುಷ್ಯಕ್ಕೆ ಪ್ರಾರ್ಥಿಸಿ ಹುಬ್ಬಳ್ಳಿ-ಧಾರವಾಡ ಕೇಂದ್ರ ಮಹಿಳಾ ಮೋರ್ಚಾ ವತಿಯಿಂದ ಹೋಮ-ಹವನ ನಡೆಸಲಾಯಿತು.

ಪಿಎಂ ಮೋದಿ ದೀರ್ಘಾಯುಷ್ಯಕ್ಕೆ ಪ್ರಾರ್ಥಿಸಿ ಹುಬ್ಬಳ್ಳಿಯಲ್ಲಿ ಹೋಮ-ಹವನ..

ಜಯನಗರದ ಈಶ್ವರ ದೇವಸ್ಥಾನದಲ್ಲಿ ಮಹಾ ಮೃತ್ಯುಂಜಯ ಹೋಮ ಹಾಗೂ ಜಪ ಕಾರ್ಯಕ್ರಮ ಆಯೋಜನೆ ಮಾಡಿದ್ದ ಮಹಿಳಾ ಮೋರ್ಚಾ ಪದಾಧಿಕಾರಿಗಳು ಮತ್ತು ಮಹಾನಗರ ಪಾಲಿಕೆ ಸದಸ್ಯರು, ಪ್ರಧಾನಿ ಮೋದಿ ಅವರಿಗೆ ಯಾವುದೇ ತೊಂದರೆಯಾಗದಿರಲಿ, ಮೋದಿ ದೀರ್ಘಾಯುಷಿಯಾಗಿ ಬಾಳಲಿ ಎಂದು ಪ್ರಾರ್ಥನೆ ಸಲ್ಲಿಸಿದರು.

ಇದನ್ನೂ ಓದಿ:ಮೋದಿ ದೀರ್ಘಾಯಸ್ಸಿಗೆ ಪ್ರಾರ್ಥನೆ.. ಗಂಗಾವತಿಯಲ್ಲಿ ಮಹಿಳೆಯರಿಂದ ಮೃತ್ಯುಂಜಯ ಹೋಮ

ಪ್ರಧಾನಿ ‌ನರೇಂದ್ರ ಮೋದಿಯವರು ಪಂಜಾಬ್ ಪ್ರವಾಸದ ವೇಳೆ ಭದ್ರತಾ ಲೋಪ ಉಂಟಾಗಿ ಕೆಲ‌ ಕಾಲ ಅಲ್ಲೇ ಸಿಲುಕಿದ್ದರು. ನಂತರ ಕಾರ್ಯಕ್ರಮ ರದ್ದುಗೊಳಿಸಿ ಅಲ್ಲಿಂದ ದೆಹಲಿಗೆ ತೆರಳಿದರು. ಹಾಗಾಗಿ, ಪ್ರಧಾನಿ ‌ಮೋದಿಯವರಿಗೆ ಯಾವುದೇ ವಿಘ್ನಗಳು ಬಾರದಿರಲಿ ಎಂದು ಬಿಜೆಪಿ ವತಿಯಿಂದ ಹೋಮ-ಹವನ ನಡೆಸಲಾಯಿತು.

ABOUT THE AUTHOR

...view details