ಹುಬ್ಬಳ್ಳಿ:ಗದಗ ಜಿಲ್ಲೆಯ ಕಪ್ಪತ್ತಗುಡ್ಡದಲ್ಲಿ ಮೈನಿಂಗ್ ನಡೆಸಲು ರಾಜಕೀಯ ವ್ಯಕ್ತಿಗಳು ಕುತಂತ್ರ ನಡೆಸಿದ್ದಾರೆ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ ಆರೋಪಿಸಿದರು.
ಕಪ್ಪತ್ತಗುಡ್ಡದಲ್ಲಿ ಮೈನಿಂಗ್ ನಡೆಸಲು ರಾಜಕೀಯ ವ್ಯಕ್ತಿಗಳ ಕುತಂತ್ರ: ಹಿರೇಮಠ ಆರೋಪ - Fight to save the kappata hill
ಕಪ್ಪತ್ತಗುಡ್ಡದಲ್ಲಿ ಮೈನಿಂಗ್ಗೆ ಅನುಮತಿ ನೀಡುವಂತೆ ರಾಜಕೀಯ ವ್ಯಕ್ತಿಗಳು ಕೇಂದ್ರಕ್ಕೆ ಪತ್ರ ಬರೆದಿರುವುದು ಖಂಡನೀಯ ಎಂದು ಎಸ್.ಆರ್. ಹಿರೇಮಠ ಆರೋಪಿಸಿದ್ದಾರೆ. ಕಪ್ಪತ್ತಗುಡ್ಡ ಉಳಿವಿಗಾಗಿ ಸಾಕಷ್ಟು ಹೋರಾಟಗಳು ಮುಂದುವರಿಯುತ್ತವೆ ಎಂದಿದ್ದಾರೆ.
ಕಪ್ಪತ್ತಗುಡ್ಡ ಮೈನಿಂಗ್ ನಡೆಸಲು ರಾಜಕೀಯ ವ್ಯಕ್ತಿಗಳ ಕುತಂತ್ರ: ಹಿರೇಮಠ ಆರೋಪ
ನಗರದಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕಪ್ಪತ್ತಗುಡ್ಡ ಉಳಿವಿಗಾಗಿ ಸಾಕಷ್ಟು ಹೋರಾಟಗಳು ನಡೆಯುತ್ತಿವೆ. ಇದರ ಮಧ್ಯೆ ಕೆಲ ರಾಜಕೀಯ ನಾಯಕರು ಮೈನಿಂಗ್ ಮಾಫಿಯಾ ನಡೆಸುತ್ತಿದ್ದಾರೆ ಎಂದು ದೂರಿದರು.
ಅಲ್ಲದೆ ಮೈನಿಂಗ್ ನಡೆಸಲು ಅನುಮತಿ ನೀಡುವಂತೆ ಕೇಂದ್ರ ಅರಣ್ಯ ಸಚಿವರಿಗೆ ಹಾವೇರಿ ಸಂಸದ ಶಿವಕುಮಾರ ಉದಾಸಿ ಹಾಗೂ ಬ್ಯಾಡಗಿ ಶಾಸಕ ವಿ.ಆರ್. ಬಳ್ಳಾರಿ ಅವರು ಬರೆದಿದ್ದಾರೆ ಎನ್ನಲಾದ ಪತ್ರಗಳನ್ನು ಬಿಡುಗಡೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಶಾಸಕರು ಹಾಗೂ ಸಂಸದರ ಈ ನಡೆ ಖಂಡನೀಯ ಎಂದರು.