ಹುಬ್ಬಳ್ಳಿ: ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ದೇಶ ಸಂಪೂರ್ಣ ಲಾಕ್ಡೌನ್ ಆಗಿದೆ. ಆದರೂ ಜನರು ತಮ್ಮ ವಾಹನಗಳಲ್ಲಿ ಅನವಶ್ಯಕವಾಗಿ ಸುತ್ತಾಡುತ್ತಿದ್ದಾರೆ.
ಲಾಕ್ಡೌನ್ ನಡುವೆಯೂ ಅನಗತ್ಯ ಸುತ್ತಾಟ: ಬೈಕ್-ಕಾರು ಸೀಜ್ ಮಾಡಿದ ಪೊಲೀಸರು
ದೇಶ ಸಂಪೂರ್ಣ ಲಾಕ್ಡೌನ್ ಆಗಿದ್ದರೂ ಜನರು ತಮ್ಮ ವಾಹನಗಳಲ್ಲಿ ಅನವಶ್ಯಕವಾಗಿ ಸುತ್ತಾಡುತ್ತಿದ್ದಾರೆ. ಈ ರೀತಿ ಅನವಶ್ಯಕವಾಗಿ ಸಂಚಾರ ಮಾಡುತ್ತಿದ್ದ ಬೈಕ್ ಹಾಗೂ ಕಾರುಗಳನ್ನು ಪೊಲೀಸು ಸೀಜ್ ಮಾಡಿದರು.
hbl
ಸಂಚಾರಿ ಪೊಲೀಸ್ ಠಾಣೆಯ ಅಧಿಕಾರಿಗಳಾದ ಎಸ್.ಎಂ.ಸಂದಿಗವಾಡ ಹಾಗೂ ಪ್ರಶಾಂತ ನಾಯಕ ನೇತೃತ್ವದಲ್ಲಿ ಪೊಲೀಸರು ಅನವಶ್ಯಕವಾಗಿ ಸಂಚಾರ ಮಾಡುತ್ತಿದ್ದ ಬೈಕ್ ಹಾಗೂ ಕಾರುಗಳನ್ನು ಸೀಜ್ ಮಾಡಿದರು.
ದೇಶದಲ್ಲಿ ಲಾಕ್ಡೌನ್ ಆದೇಶ ಜಾರಿಯಲ್ಲಿದ್ದರೂ ಕೂಡ ಅನವಶ್ಯಕವಾಗಿ ಓಡಾಡುತ್ತಿದ್ದ ಕಾರು ಹಾಗೂ ಬೈಕ್ಗಳನ್ನು ಟೋಯಿಂಗ್ ವೆಹಿಕಲ್ ಮೂಲಕ ಸ್ಟೇಷನ್ಗೆ ತೆಗೆದುಕೊಂಡು ಹೋಗಲಾಯಿತು.