ಹುಬ್ಬಳ್ಳಿ:ನಡು ರಸ್ತೆಯಲ್ಲಿ ಕಾರು ನಿಲ್ಲಿಸಿ ಹೋಗಿದ್ದ ಚಾಲಕನಿಗೆ ಪೊಲೀಸರು ಬಿಸಿ ಮುಟ್ಟಿಸಿದ ಘಟನೆ ನಗರದ ಕೊಪ್ಪಿಕರ ರಸ್ತೆಯಲ್ಲಿ ನಡೆದಿದೆ.
ನಡು ರಸ್ತೆಯಲ್ಲಿ ಕಾರು ನಿಲ್ಲಿಸಿ ಹೋಗಿದ್ದವನಿಗೆ ಬಿಸಿ ಮುಟ್ಟಿಸಿದ ಪೊಲೀಸರು - police locked who park in main road
ಚಾಲಕ ಕಾರಿನ ಅರ್ಧ ಭಾಗ ರಸ್ತೆಗೆ ಹೊಂದಿಕೊಳ್ಳುವಂತೆ ಬಿಟ್ಟು ಹೋಗಿದ್ದ. ಇದನ್ನು ಕಂಡ ಟ್ರಾಫಿಕ್ ಪೊಲೀಸರು ಕಾರಿನ ವ್ಹೀಲ್ ಲಾಕ್ ಮಾಡಿ ಹೋಗಿದ್ದಾರೆ. ಕಾರ್ ಚಾಲಕನಿಗೆ ಬಿಸಿ ಮುಟ್ಟಿಸುವ ಭರದಲ್ಲಿ ಸಾರ್ವಜನಿಕರಿಗೂ ಬಿಸಿ ತಟ್ಟುವುದನ್ನು ಪೊಲೀಸರು ಮರೆತಿದ್ದರು. ಟ್ರಾಫಿಕ್ ಜಾಮ್ ಆಗಿ ಪೊಲೀಸರ ಲಾಕ್ನಿಂದ ಎಲ್ಲರೂ ಹೈರಾಣಾಗಿದ್ದರು.
ಇಲ್ಲಿನ ಕೊಪ್ಪಿಕರ ರಸ್ತೆಯ ಪಾರ್ಕಿಂಗ್ ಜಾಗದಲ್ಲಿ ವಾಹನಗಳು ಹೆಚ್ಚಾಗಿ ಇದ್ದರಿಂದ ಕಾರು ನಿಲ್ಲಿಸಲು ಕೊಂಚ ಸ್ಥಳವಷ್ಟೇ ಇತ್ತು. ಹಾಗಾಗಿ ಚಾಲಕ ಕಾರಿನ ಅರ್ಧ ಭಾಗ ರಸ್ತೆಗೆ ಹೊಂದಿಕೊಳ್ಳುವಂತೆ ಬಿಟ್ಟು ಹೋಗಿದ್ದ. ಇದನ್ನು ಕಂಡ ಟ್ರಾಫಿಕ್ ಪೊಲೀಸರು ಕಾರಿನ ವ್ಹೀಲ್ ಲಾಕ್ ಮಾಡಿ ಹೋಗಿದ್ದಾರೆ. ಕಾರು ಚಾಲಕನಿಗೆ ಬಿಸಿ ಮುಟ್ಟಿಸುವ ಭರದಲ್ಲಿ ಸಾರ್ವಜನಿಕರಿಗೂ ಬಿಸಿ ತಟ್ಟುವುದನ್ನು ಪೊಲೀಸರು ಮರೆತಿದ್ದರು. ಟ್ರಾಫಿಕ್ ಜಾಮ್ ಆಗಿ ಪೊಲೀಸರ ಲಾಕ್ನಿಂದ ಎಲ್ಲರೂ ಹೈರಾಣಾಗಿದ್ದರು.
ನಡುರಸ್ತೆಯಲ್ಲೇ ಕಾರ್ ನಿಲ್ಲಿಸಿದ್ದರಿಂದ ಪರಿಸ್ಥಿತಿ ಹದಗೆಡುವುದನ್ನು ಅರಿತ ಪೊಲೀಸರು ಸ್ಥಳಕ್ಕೆ ಓಡಿ ಬಂದು ಲಾಕ್ ತೆಗೆದರು. ಕಾರು ಅನ್ಲಾಕ್ ಆದ ನಂತರವೇ ಸಂಚಾರ ಸುಗಮವಾಯಿತು. ಸಾರ್ವಜನಿಕರು ಕಾರು ಚಾಲಕನಿಗೆ ಹಿಡಿಶಾಪ ಹಾಕಿದರು.