ಧಾರವಾಡ :ಲಾಕ್‌ಡೌನ್ ಉಲ್ಲಂಘನೆ ಮಾಡುವವರಿಗೆ ಬೆತ್ತದ ರುಚಿ ತೋರಿಸುತ್ತಿದ್ದ ಪೊಲೀಸರು ಇದೀಗ ಮೈಕ್ ಹಿಡಿದುಕೊಂಡು ಫೀಲ್ಡಿಗಿಳಿದು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಮಹಾಮಾರಿ ಕೊರೊನಾ ವೈರಸ್ ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತಿರುವ ಕಾರಣ ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಬಸವರಾಜ ಬಸಾಪೂರ ನೇತೃತ್ವದಲ್ಲಿ ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತೆ ವಹಿಸಿಕೊಳ್ಳುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.
ಲಾಠಿ ಬಿಟ್ಟು ಕೈಯೊಳಗೆ ಮೈಕ್ ಹಿಡಿದ ಪೊಲೀಸರು.. ಯಾಕಂದ್ರೆ, ಕೊರೊನಾ.. - corona scare
ಸಿಪಿಐ ಬಸವರಾಜ ಬಸಾಪೂರ ಅವರು ಠಾಣೆಯ ಸಿಬ್ಬಂದಿ ಜೊತೆ ಕಳೆದ ಎಂಟು ದಿನಗಳಿಂದ ಧಾರವಾಡದ ವಿದ್ಯಾಗಿರಿಯ ವಿವಿಧ ಬಡಾವಣೆಗಳಲ್ಲಿ ಸಂಚರಿಸಿ ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ.
poice

ಮೈಕ್ ಹಿಡಿದುಕೊಂಡು ಪೊಲೀಸರು ಯಾರೂ ಹೊರಗೆ ಬರದಂತೆ ತಮ್ಮ ತಮ್ಮ ಸುತ್ತಮುತ್ತಲಿನ ವಾತಾವರಣವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಅವಶ್ಯಕತೆ ಇದ್ರೇ ಮಾತ್ರ ಹೊರಗೆ ಬರಬೇಕು ಎಂದು ಮನವಿ ಮಾಡುತ್ತಿದ್ದಾರೆ.