ಕರ್ನಾಟಕ

karnataka

ETV Bharat / city

ಬೈಕ್ ಸ್ಕಿಡ್ ಆಗಿ ಅಪಘಾತ : ಚಿಕಿತ್ಸೆ ಫಲಿಸದೆ ಪೊಲೀಸ್ ಕಾನ್ಸ್​​ಟೇಬಲ್ ಸಾವು! - ಬೈಕ್ ಸ್ಕಿಡ್ ಆಗಿ ಅಪಘಾತ

ತಲೆಗೆ ಗಂಭೀರವಾದ ಪೆಟ್ಟು ಬಿದ್ದ ಪರಿಣಾಮ, ಚಿಕಿತ್ಸೆ ಫಲಿಸದೇ ಕಿರಣ ಪಾಟೀಲ ಇಂದು ಸಾವನಪ್ಪಿದ್ದಾರೆ ಎಂದು ತಿಳಿದು ಬಂದಿದೆ..

Police constable died due to road accident
ಪೊಲೀಸ್​​ ಕಾನ್ಸ್​​ಟೇಬಲ್​​ ಕಿರಣ ಪಾಟೀಲ

By

Published : Dec 19, 2021, 3:06 PM IST

ಹುಬ್ಬಳ್ಳಿ : ಕಳೆದ ಒಂದು ವಾರದ ಹಿಂದೆ ನಗರದ ಗಬ್ಬೂರು ಬೈಪಾಸ್ ಬಳಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದ ಪೊಲೀಸ್ ಕಾನ್ಸ್​​ಟೇಬಲ್ ಬೈಕ್ ಸ್ಕಿಡ್ ಆಗಿ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಿಸದೆ ಇಂದು ಬೆಳಗಿನ ಜಾವ ಸಾವನಪ್ಪಿದ್ದಾರೆ.

ಪೊಲೀಸ್​​ ಕಾನ್ಸ್​​ಟೇಬಲ್​​ ಕಿರಣ ಪಾಟೀಲ

ಹುಬ್ಬಳ್ಳಿಯ ಹೆಡ್ ಕ್ವಾಟರ್​​ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಪೊಲೀಸ್​​ ಕಾನ್ಸ್​​ಟೇಬಲ್​​ ಕಿರಣ ಪಾಟೀಲ, ಅದರಗುಂಚಿಯಿಂದ ಹುಬ್ಬಳ್ಳಿಗೆ ಕರ್ತವ್ಯಕ್ಕೆ ಹಾಜರಾಗುವ ವೇಳೆ ಬೈಕ್ ಸ್ಕಿಡ್ ಆಗಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು.

ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ನಂತರ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ತಲೆಗೆ ಗಂಭೀರವಾದ ಪೆಟ್ಟು ಬಿದ್ದ ಪರಿಣಾಮ, ಚಿಕಿತ್ಸೆ ಫಲಿಸದೇ ಕಿರಣ ಪಾಟೀಲ ಇಂದು ಸಾವನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಕಿರಣ ಪಾಟೀಲ ಅವರಿಗೆ ಪೀಡ್ಸ್ ಬಂದ ಕಾರಣ ಹೀಗಾಗಿತ್ತು ಎಂದು ಹೇಳಲಾಗಿತ್ತು. ತದನಂತರ ಅವರನ್ನ ಬದುಕಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡಿದರೂ, ಯಾವುದೇ ಪ್ರಯೋಜನವಾಗಿಲ್ಲ. ಹುಬ್ಬಳ್ಳಿಯ ದಕ್ಷಿಣ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಇದನ್ನೂ ಓದಿ:ಚಿಕ್ಕಬಳ್ಳಾಪುರ: ವಿಷ ಸೇವಿಸಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಯತ್ನ, ಬಾಲಕ ಸಾವು

ABOUT THE AUTHOR

...view details