ಹುಬ್ಬಳ್ಳಿ:ಪೊಲೀಸ್ ಕೆಲಸಕ್ಕೆ ಎಷ್ಟು ಗೌರವ ಇದೆಯೋ, ಅಷ್ಟೇ ಗೌರವ ಪೊಲೀಸರು ಹಾಕಿಕೊಳ್ಳುವ ಸಮವಸ್ತ್ರಗಳಿಗೂ ಇರುತ್ತದೆ. ಆದರೆ, ಹು-ಧಾ ಮಹಾನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಮಾತ್ರ ಪೊಲೀಸರು ಹಾಕಿಕೊಳ್ಳುವ ಟೋಪಿಗೆ ಬೆಲೆಯಿಲ್ವೇ? ಎಂದು ಪ್ರಶ್ನಿಸುವಂತಾಗಿದೆ. ನಗರದ ಹೃದಯ ಭಾಗ ಚೆನ್ನಮ್ಮ ವೃತ್ತದ ಆಸುಪಾಸಿನಲ್ಲಿಯೇ ಪೊಲೀಸ್ ಹಾಗೂ ಸಂಚಾರಿ ಪೊಲೀಸರ ಟೋಪಿಗಳನ್ನು ಎಲ್ಲೆಂದರಲ್ಲಿ ಎಸೆದಿರುವುದು ಗೋಚರಿಸಿತು.
ಪೊಲೀಸರ ಟೋಪಿಗೆ ಬೆಲೆ ಇಲ್ಲದಾಯಿತೇ?: ಹುಬ್ಬಳ್ಳಿಯಲ್ಲಿ ಕಂಡುಬಂತು ಬೇಜವಾಬ್ದಾರಿ - Police cap
ಹುಬ್ಬಳ್ಳಿ ನಗರದ ಹೃದಯ ಭಾಗ ಚೆನ್ನಮ್ಮ ವೃತ್ತದ ಆಸುಪಾಸಿನಲ್ಲಿಯೇ ಪೊಲೀಸ್ ಹಾಗೂ ಸಂಚಾರಿ ಪೊಲೀಸರ ಟೋಪಿಗಳನ್ನು ಎಲ್ಲೆಂದರಲ್ಲಿ ಎಸೆದಿರುವುದು ಕಂಡುಬಂದಿದೆ.
![ಪೊಲೀಸರ ಟೋಪಿಗೆ ಬೆಲೆ ಇಲ್ಲದಾಯಿತೇ?: ಹುಬ್ಬಳ್ಳಿಯಲ್ಲಿ ಕಂಡುಬಂತು ಬೇಜವಾಬ್ದಾರಿ hubli](https://etvbharatimages.akamaized.net/etvbharat/prod-images/768-512-12081026-thumbnail-3x2-sowmya.jpg)
ಚೆನ್ನಮ್ಮ ವೃತ್ತದ ಆಸುಪಾಸಿನಲ್ಲಿ ಬಿದ್ದಿರುವ ಪೊಲೀಸ್ ಟೋಪಿಗಳು
ಚೆನ್ನಮ್ಮ ವೃತ್ತದ ಆಸುಪಾಸಿನಲ್ಲಿ ಬಿದ್ದಿರುವ ಪೊಲೀಸ್ ಟೋಪಿಗಳು
ಪೊಲೀಸರ ಟೋಪಿಗಳು ಬಣ್ಣ ಕಳೆದುಕೊಂಡಿದ್ದರೆ ಅವುಗಳನ್ನು ವ್ಯವಸ್ಥಿತ ಸ್ಥಳದಲ್ಲಿ ವಿಲೇವಾರಿ ಮಾಡಬೇಕು. ಅದನ್ನು ಬಿಟ್ಟು ಬೇಕಾಬಿಟ್ಟಿಯಾಗಿ ರಸ್ತೆಯ ಬದಿಯಲ್ಲಿ ಎಸೆದರೆ ಹೇಗೆ ಎಂಬುದು ಸಾರ್ವಜನಿಕರ ಪ್ರಶ್ನೆ.ಈ ಕೂಡಲೇ ಪೊಲೀಸ್ ಆಯುಕ್ತರು ಈ ಬಗ್ಗೆ ಕ್ರಮ ಜರುಗಿಸಿ, ಮುಂಬರುವ ದಿನಗಳಲ್ಲಿ ಇಂತಹ ಅವ್ಯವಸ್ಥೆ ತಲೆದೋರದಂತೆ ಎಚ್ಚರಿಕೆ ವಹಿಸಬೇಕು ಅನ್ನೋದು ಜನರ ಕಿವಿಮಾತು.
ಇದನ್ನೂ ಓದಿ:ನರಹಂತಕ ಕಾಡಾನೆ ಸೆರೆ.. 5 ಸಾಕಾನೆ, 120 ಸಿಬ್ಬಂದಿ ಯಶಸ್ವಿ ಕಾರ್ಯಾಚರಣೆ
Last Updated : Jun 10, 2021, 1:21 PM IST