ಹುಬ್ಬಳ್ಳಿ:ವಾಣಿಜ್ಯ ನಗರಿ ಹುಬ್ಬಳ್ಳಿಯ ಟೆಂಡರ್ ಶ್ಯೂರ್ ರಸ್ತೆಯ ಡ್ರೈನೇಜ್ಗೆ ಅಳವಡಿಸಲಾಗಿದ್ದ ಚೆಂಬರ್ ಪ್ಲೇಟ್ ಕಳ್ಳತನ ಮಾಡಿದ ಘಟನೆ ಹುಬ್ಬಳ್ಳಿಯ ಶಿರೂರ ಪಾರ್ಕನಲ್ಲಿ ನಡೆದಿದ್ದು, ಕಳ್ಳತನ ಮಾಡಿದ ಆರೋಪಿಗಳನ್ನು ಬಂಧಿಸುವಲ್ಲಿ ವಿದ್ಯಾನಗರ ಪೊಲೀಸ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಹುಬ್ಬಳ್ಳಿ: ಡ್ರೈನೇಜ್ ಚೆಂಬರ್ ಪ್ಲೇಟ್ ಖದೀಮರು ಪೊಲೀಸ್ ವಶಕ್ಕೆ - ಡ್ರೈನೇಜ್ ಚೆಂಬರ್ ಪ್ಲೇಟ್ ಖದೀಮರು
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಅಪರಾಧ ಪ್ರಕರಣಗಳು ದಿನೇ ದಿನೇ ಹೆಚ್ಛಾಗುತ್ತಿದ್ದು, ಕಳ್ಳತನ ಪ್ರಕರಣಗಳು ಏರಿಕೆಯಾಗುತ್ತಿದೆ. ಡ್ರೈನೇಜ್ ಚೇಂಬರ್ಗೆ ಅಳವಡಿಸಿದ್ದ ಪ್ಲೇಟ್ ಕದ್ದ ಕಳ್ಳರು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.
Hubli
ಭೈರಿದೇವರಕೊಪ್ಪದ ಬಸವರಾಜ ಕಂದಗಲ್,ಉಣಕಲ್ಲಿನ ಲೋಹಿತ ಬಾಳಪ್ಪನವರ,ಮಹೇಶ ಪದ್ಮಣ್ಣವರ ಹಾಗೂ ಮಹ್ಮದ ಗೌಸ್ ಎಂಬುವವರನ್ನು ಬಂಧಿಸಿದ್ದು, ಬಂಧಿತರಿಂದ 81 ಸಾವಿರ ರೂ. ಮೌಲ್ಯದ ಮೂರು ವಾಟರ್ ಸ್ಟ್ರೋಮ್ ಹೆಸರಿನ ಚೆಂಬರ್ ಪ್ಲೇಟ್ ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಕುರಿತು ವಿದ್ಯಾನಗರದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.