ಹುಬ್ಬಳ್ಳಿ:ಸಿದ್ಧಾರೂಢ ಮಠದ ಹೆಸರು ಹಾಳು ಮಾಡುವ ಉದ್ದೇಶದಿಂದ ಮಠದ ನಂದಾದೀಪ (ಆರೂಢ ಜ್ಯೋತಿ) ನಂದಿದೆ ಎಂದು ಕಿಡಿಗೇಡಿಗಳು ಪ್ರಚಾರ ಮಾಡುತ್ತಿದ್ದಾರೆ. ಇದು ಭಕ್ತರಲ್ಲಿ ತಪ್ಪು ಸಂದೇಶ ರವಾನೆಯಾಗುವಂತೆ ಮಾಡಿದೆ.
ಸಿದ್ಧಾರೂಡ ಮಠದ ನಂದಾದೀಪ ನಂದಿದ ವದಂತಿ; ಸ್ಪಷ್ಟನೆ ನೀಡಿದ ಟ್ರಸ್ಟ್ - ಮಠದ ಕುರಿತು ಕಿಡಿಗೇಡಿಗಳಿಂದ ವದಂತಿ
ಐತಿಹಾಸಿಕ ಕ್ಷೇತ್ರಕ್ಕೆ ಕೆಟ್ಟ ಹೆಸರು ತರಲು ಕೆಲವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಈ ಬಗ್ಗೆ ಭಕ್ತರು ಯಾವುದೇ ವದಂತಿಗಳಿಗೆ ಕಿವಿಕೊಡಬಾರದು ಎಂದು ಟ್ರಸ್ಟ್ ಮನವಿ ಮಾಡಿದೆ.

ಸ್ಪಷ್ಟನೆ ನೀಡಿದ ಟ್ರಸ್ಟ್
ಮಠದಲ್ಲಿ ನಂದಾದೀಪ ಆರಿಹೋಗಿದೆ ಎಂದು ಕಿಡಗೇಡಿಗಳು ವದಂತಿ ಹಬ್ಬಿಸಿದ್ದಾರೆ. ಹುಬ್ಬಳ್ಳಿ ಅಲ್ಲದೇ ಧಾರವಾಡ ಜಿಲ್ಲಾದ್ಯಂತ ಆತಂಕದ ವಾತಾವರಣ ನಿರ್ಮಾಣವಾಗಿದೆ. ಮಠದ ಭಕ್ತರು ಸುಳ್ಳು ಸುದ್ದಿಗೆ ಕಿವಿಗೊಡಬಾರದು. ಮನೆಯಲ್ಲಿದ್ದು ಅಜ್ಜನನ್ನು ಪ್ರಾರ್ಥಿಸಬೇಕು ಎಂದು ಮಠದ ಟ್ರಸ್ಟ್ ಕಮಿಟಿ ಸ್ಪಷ್ಟನೆ ನೀಡಿದೆ.
ಮಠಕ್ಕೆ ಐತಿಹಾಸಿಕ ಹಿನ್ನೆಲೆ ಇದೆ. ಅದರಲ್ಲೂ ಆರೂಢ ಜ್ಯೋತಿ ಎಂದಿಗೂ ನಂದಿಲ್ಲ ಹಾಗೂ ಓಂ ನಮಃ ಬಿಜಾಕ್ಷರ ಉಚ್ಚಾರಣೆ ನಿಂತಿಲ್ಲ ಎಂದು ಟ್ರಸ್ಟ್ ಸ್ಪಷ್ಟಪಡಿಸಿದೆ.