ಕರ್ನಾಟಕ

karnataka

ETV Bharat / city

ಪುನೀತ್ ರಾಜ್‌ಕುಮಾರ್ ಸ್ಫೂರ್ತಿ: ಒಂದೇ ವಾರದಲ್ಲಿ 500 ಜನರಿಂದ ನೇತ್ರದಾನಕ್ಕೆ ನೋಂದಣಿ - ಎಂಎಂ ಜೋಶಿ ನೇತ್ರ ಬಂಡಾರ

ಹಿಂದೆಲ್ಲಾ ಹುಬ್ಬಳ್ಳಿಯ ನೇತ್ರ ಭಂಡಾರಕ್ಕೆ ನಿತ್ಯ 3-4 ಜನರು ಮಾತ್ರ ಕರೆ ಮಾಡಿ ನೇತ್ರದಾನದ ಬಗ್ಗೆ ಮಾಹಿತಿ ಪಡೆಯುತ್ತಿದ್ದರು. ಆದರೆ, ಅಪ್ಪು ಸಾವಿನ ನಂತರ ನೇತ್ರದಾನಿಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಿದೆ.

puneeth-rajkumar
ಪುನೀತ್ ರಾಜಕುಮಾರ್

By

Published : Nov 8, 2021, 4:21 PM IST

ಹುಬ್ಬಳ್ಳಿ: ಪವರ್‌ಸ್ಟಾರ್ ಪುನೀತ್ ರಾಜಕುಮಾರ್ ನಿಧನದ ನಂತರ ನೇತ್ರದಾನಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ.‌ ಪುನೀತ್ ಅವರ ಆದರ್ಶಗಳು ಇದೀಗ ನೂರಾರು ಜನರಿಗೆ ಮಾದರಿಯಾಗಿದೆ.

ಅಪ್ಪು ತಮ್ಮ ಕಣ್ಣುಗಳನ್ನು ದಾನ ಮಾಡಿ ನಾಲ್ವರ ಬಾಳಿಗೆ ಬೆಳಕಾದರು. ಅವರ ಹಾದಿ ಹಿಡಿದಿರುವ ಜನರು ನೇತ್ರದಾನಕ್ಕೆ ನೋಂದಣಿ ಮಾಡಿಕೊಳ್ಳುತ್ತಿರುವುದು ವಿಶೇಷವಾಗಿದೆ.


ಹುಬ್ಬಳ್ಳಿಯ ಎಂಎಂ ಜೋಶಿ ನೇತ್ರ ಭಂಡಾರಕ್ಕೆ ಇದೀಗ ನೂರಾರು ಜನರು ಕರೆ ಮಾಡಿ ನೇತ್ರದಾನ ಮಾಡುವ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಕಳೆದೊಂದು ವಾರದಲ್ಲಿ 500ಕ್ಕೂ ಹೆಚ್ಚು ಜನರು ಕರೆ ಮಾಡಿ ಮಾಹಿತಿ ಪಡೆದಿದ್ದಾರೆ. ಇದುವರೆಗೂ 400 ಜನರು ನೋಂದಣಿ ಮಾಡಿಸಿ ನೇತ್ರದಾನಕ್ಕೆ ಮುಂದಾಗಿದ್ದಾರೆ.

ಅಪ್ಪು ನಿಧನಕ್ಕೂ ಮುನ್ನ ದಿವನವೊಂದಕ್ಕೆ 3-4 ಜನರು ಮಾತ್ರ ಕರೆ ಮಾಡಿ ಮಾಹಿತಿ ಪಡೆಯುತ್ತಿದ್ದರು. ಆದರೆ ಈಗ ನೇತ್ರದಾನಿಗಳ ಸಂಖ್ಯೆ, ಅವರ ಸಾವಿನ ನಂತರ ಹೆಚ್ಚಳವಾಗಿದೆ. ನೇತ್ರದಾನ ಮಾಡೋದು ಪುಣ್ಯದ ಕೆಲಸ. ನಟ ಪುನೀತ್ ಸಾವಿನ ನಂತರ ಇಷ್ಟೊಂದು ಸಂಖ್ಯೆಯಲ್ಲಿ ಜನರು ನೇತ್ರದಾನಕ್ಕೆ ಮುಂದಾಗಿರುವುದು ಇತಿಹಾಸ ಎನ್ನುತ್ತಿದ್ದಾರೆ ನೇತ್ರ ಭಂಡಾರದ ಸಿಬ್ಬಂದಿ.

ABOUT THE AUTHOR

...view details