ಹುಬ್ಬಳ್ಳಿ:ಕೊರೊನಾ ಮಹಾಮಾರಿಯಿಂದಾಗಿ ದಿನನಿತ್ಯ ದುಡಿದು ಜೀವನ ಸಾಗಿಸುವವರ ಬದುಕು ಸಂಕಷ್ಟದಲ್ಲಿ ಸಿಲುಕಿದೇ, ಅದೇ ರೀತಿ ಆಟೋ ಚಾಲಕರ ಬದುಕು ಕೂಡ ಹೊರತಾಗಿಲ್ಲ.
ದಿನವಿಡೀ ದುಡಿದರೂ ಆಟೋ ಗ್ಯಾಸ್ ಖರ್ಚು ಬರುತ್ತಿಲ್ಲವೆಂದು ಆಟೋ ಚಾಲಕರು ಗೋಳಾಡುತ್ತಿದ್ದಾರೆ. ಕೊರೊನಾ ವೈರಸ್ ನಿಯಂತ್ರಣಕ್ಕೆ ಲಾಕ್ಡೌನ್ ಜಾರಿಯಾಗುತ್ತಿದ್ದಂತೆ ಎಲ್ಲ ವ್ಯಾಪಾರ ವಹಿವಾಟು ಸೇರಿದಂತೆ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು. ಪರಿಣಾಮ ತಿಂಗಳುಗಳಿಂದ ಕೈಗಳಿಗೆ ಕೆಲಸವಿಲ್ಲದೇ ಜೀವನ ನಿರ್ವಹಣೆ ಕಷ್ಟವಾಗಿತ್ತು.
ಇದೀಗ ಕೇಂದ್ರ ಸರ್ಕಾರ ಲಾಕ್ಡೌನ್ ಸಡಿಲಿಕೆ ಸೂಚಿಸಿದಂತೆ ರಾಜ್ಯದಲ್ಲಿ ವಾಹನ ಸಂಚಾರ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಿಲಾಗಿತ್ತು. ಆದರೆ, ಇದೀಗ ಕೊರೊನಾ ವೈರಸ್ ಪರಿಣಾಮವಾಗಿ ಆಟೋ ಚಾಲಕರು ರಸ್ತೆಗಿಳಿದಿದ್ದರು. ಆದರೆ, ಜನರು ಆಟೋ ಹತ್ತಲು ಹಿಂದು - ಮುಂದು ನೋಡುತ್ತಿದ್ದಾರೆ.
ಇದರಿಂದ ದಿನನಿತ್ಯ ಸಾವಿರಾರು ರೂಪಾಯಿ ದುಡಿಯುತ್ತಿದ್ದವರು ಇದೀಗ 100 ರಿಂದ 200 ರೂಪಾಯಿಗೆ ತೃಪ್ತಿ ಪಡಬೇಕಾಗಿದೆ. ಇನ್ನೂ ದುಡಿದ ಹಣದಲ್ಲಿ ಆಟೋಗೆ ಪೆಟ್ರೋಲ್ ಅಥವಾ ಗ್ಯಾಸ್ಗೇ ಸಾಲುತ್ತಿಲ್ಲ ಅಲ್ಲದೇ ದಿನದ ಬಾಡಿಗೆ ಆಗದಿದ್ದರು ಸಹ ಆಟೋ ಮಾಲೀಕರಿಗೆ ದುಡ್ಡು ನೀಡಲೇಬೇಕಾಗಿದೆ.
ಈಗಿನ ಪರಿಸ್ಥಿತಿಯಲ್ಲಿ ದುಡಿಮೆ ಇಲ್ಲದ ಹಿನ್ನೆಲೆಯಲ್ಲಿ ಆಟೋ ಚಾಲಕರು ದುಡಿಮೆ ಮಾಡಿಯೂ ಸಾಲಗರರಾಗುವಂತಾಗಿದೆ. ಇತ್ತ ರಾಜ್ಯ ಸರ್ಕಾರ ಆಟೋ ಚಾಲಕರಿಗೆ ಸಹಾಯಧನವನ್ನು ಬಿಡುಗಡೆ ಮಾಡಿದೆ. ಅದೂ ಯಾವಾಗಾ ಬರುತ್ತೊ ಗೊತ್ತಿಲ್ಲದ ಪರಿಣಾಮ ಕುಟುಂಬ ನಿರ್ವಹಣೆ ಕಷ್ಟವಾಗಿದೆ ಎಂದು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.