ಹುಬ್ಬಳ್ಳಿ:ಬಹಳ ವೇಗದಲ್ಲಿ ಬೆಳೆಯುತ್ತಿರುವ ಹುಬ್ಬಳ್ಳಿ - ಧಾರವಾಡ ಮಹಾನಗರದಲ್ಲಿ ಪಾರ್ಕಿಂಗ್ ಸಮಸ್ಯೆ ದಿನದಂದ ದಿನಕ್ಕೆ ಹೆಚ್ಚುತ್ತಿದೆ. ಅಲ್ಲದೇ ಪಾರ್ಕಿಂಗ್ಗೆ ಅನುಮತಿ ಪಡೆದ ಅದೆಷ್ಟೋ ಕಟ್ಟಡಗಳು ಪಾರ್ಕಿಂಗ್ ಸ್ಥಳವನ್ನು ವಾಣಿಜ್ಯ ಚಟುವಟಿಕೆಗೆ ಬಳಕೆ ಮಾಡಿಕೊಳ್ಳುತ್ತಿವೆ. ಇದಕ್ಕೆ ಕಡಿವಾಣ ಹಾಕಬೇಕಿದ್ದ ಮಹಾನಗರ ಪಾಲಿಕೆ ಹಿಂದೇಟು ಹಾಕುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಪಾರ್ಕಿಂಗ್ ಹೆಸರಲ್ಲಿ ಅನುಮತಿ: ವಾಣಿಜ್ಯ ಚಟುವಟಿಕೆಗಳ ಹೆಸರಲ್ಲಿ ಕಿತಾಪತಿ - ಪಾರ್ಕಿಂಗ್ ಸಮಸ್ಯೆ
ಹುಬ್ಬಳ್ಳಿ - ಧಾರವಾಡ ಮಹಾನಗರದಲ್ಲಿ ಪಾರ್ಕಿಂಗ್ಗೆ ಅನುಮತಿ ಪಡೆದ ಅದೆಷ್ಟೋ ಕಟ್ಟಡಗಳು ಪಾರ್ಕಿಂಗ್ ಸ್ಥಳವನ್ನು ವಾಣಿಜ್ಯ ಚಟುವಟಿಕೆಗೆ ಬಳಕೆ ಮಾಡಿಕೊಳ್ಳುತ್ತಿವೆ. ಇದಕ್ಕೆ ಕಡಿವಾಣ ಹಾಕಬೇಕಿದ್ದ ಮಹಾನಗರ ಪಾಲಿಕೆ ಹಿಂದೇಟು ಹಾಕುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಸುಮಾರು 300ಕ್ಕೂ ಹೆಚ್ಚು ಕಟ್ಟಡಗಳು ಪಾರ್ಕಿಂಗ್ ಸ್ಥಳವನ್ನು ಅತಿಕ್ರಮಣಗೊಳಿಸಿಕೊಂಡು ಮಹಾನಗರ ಪಾಲಿಕೆ ನಿಯಮ ಉಲ್ಲಂಘನೆ ಮಾಡಿದ್ದವು. ಈ ಹಿಂದೆ ಪಾಲಿಕೆ ಕಾರ್ಯಾಚರಣೆ ನಡೆಸಿ ಅಂತಹ ಕಟ್ಟಡಗಳನ್ನು ತೆರವುಗೊಳಿಸಿತ್ತು. ಆದರೆ, ಈಗ ಸುಮಾರು ಮೂವತ್ತಕ್ಕೂ ಹೆಚ್ಚು ಕಟ್ಟಡಗಳು ಪಾರ್ಕಿಂಗ್ ಸ್ಥಳವನ್ನು ಅತಿಕ್ರಮಣಗೊಳಿಸಿದ್ದು, ಸ್ಥಳಾವಕಾಶ ಇಲ್ಲದೇ ರಸ್ತೆಯಲ್ಲಿ ಎಲ್ಲೆಂದರಲ್ಲಿ ಪಾರ್ಕ್ ಮಾಡುವಂತಾಗಿದೆ.
ಜನದಟ್ಟಣೆ ಬೆಳೆಯುತ್ತಿದ್ದಂತೆಯೇ ವಾಹನ ಸಂಚಾರ ಕೂಡ ಹೆಚ್ಚಾಗುತ್ತಿದೆ. ಆದರೇ ಪಾರ್ಕಿಂಗ್ ಸಮಸ್ಯೆ ಮಾತ್ರ ನಿಯಂತ್ರಣಕ್ಕೆ ಬರುತ್ತಿಲ್ಲ. ಅಲ್ಲದೇ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿ ಕೂಡ ಆಮೆಗತಿಯಲ್ಲಿ ಸಾಗುತ್ತಿರುವ ಹಿನ್ನೆಲೆಯಲ್ಲಿ ಕೂಡಲೇ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಅತಿಕ್ರಮಣ ಪಾರ್ಕಿಂಗ್ ಸ್ಥಳಗಳಿಗೆ ನೋಟಿಸ್ ನೀಡುವ ಮೂಲಕ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕಿದೆ.