ಕರ್ನಾಟಕ

karnataka

ETV Bharat / city

ಕಲಿತ ಕಾಲೇಜಿನಲ್ಲಿ ಪದ್ಮಶ್ರೀ ಪುರಸ್ಕೃತರಿಗೆ ಸನ್ಮಾನ.. ನಡಕಟ್ಟಿನ್​ರಿಗೆ ಅಭಿನಂದನೆ ಸಲ್ಲಿಸಿದ ಸಿಬ್ಬಂದಿ..

ಮೂಲತಃ ಕೃಷಿ ಕುಟುಂಬದವರಾದ ಅಬ್ದುಲ್ ಅವರು ರೈತರಿಗಾಗಿ ವಿಶೇಷ ಮತ್ತು ಅತಿ ವೇಗವಾಗಿ ಉಳುಮೆ ಮಾಡುವ ಯಂತ್ರವನ್ನ ಕಂಡು ಹಿಡಿಯಬೇಕು ಅಂತಾ ನಿರಂತರ ಪ್ರಯತ್ನದಿಂದ ಕೂರಿಗೆ ಯಂತ್ರವನ್ನ ಕಂಡು ಹಿಡಿದಿದ್ದಾರೆ..

nadakatin-felicitation
ನಡಕಟ್ಟಿನ್​ರಿಗೆ ಅಭಿನಂದನೆ

By

Published : Feb 1, 2022, 6:47 PM IST

ಹುಬ್ಬಳ್ಳಿ :ಕೃಷಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡುವ ಮೂಲಕ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಅಣ್ಣಿಗೇರಿಯ ಅಬ್ದುಲ್ ಖಾದರ್ ನಡಕಟ್ಟಿನ ಅವರಿಗೆ ವಾಣಿಜ್ಯನಗರಿ ಹುಬ್ಬಳ್ಳಿಯ ಪಿ ಸಿ ಜಾಬಿನ್ ಕಾಲೇಜಿನ ಆಡಳಿತ ಮಂಡಳಿಯಿಂದ ಸನ್ಮಾನಿಸಲಾಯಿತು.

ಪದ್ಮಶ್ರೀ ಪುರಸ್ಕಾರ ಪಡೆದಿರುವ ಅಬ್ದುಲ್ ಖಾದರ್ ನಡಕಟ್ಟಿನ್​ ಅವರು 1972ರಲ್ಲಿ ಹುಬ್ಬಳ್ಳಿಯ ವಿದ್ಯಾನಗರದ ಪಿ ಸಿ ಜಾಬಿನ್ ವಿಜ್ಞಾನ ಮಹಾವಿದ್ಯಾಲಯದಲ್ಲಿ ಪಿಯುಸಿ ಪ್ರಥಮ ವರ್ಷ ವ್ಯಾಸಂಗ ಮಾಡಿದ್ದು, ಈ ನಿಟ್ಟಿನಲ್ಲಿ ಕಾಲೇಜಿನ ಆಡಳಿತ ಮಂಡಳಿ ಸನ್ಮಾನಿಸಿ ಅಭಿನಂದಿಸಿದ್ದಾರೆ.

ಅಣ್ಣಿಗೇರಿ ಪಟ್ಟಣದ ರೈತಾಪಿ ಕುಟುಂಬದಿಂದ ಬಂದ ಅಬ್ದುಲ್​ ಖಾದರ್​ ಅವರು, ವಿಶೇಷತೆಗಳುಳ್ಳ ಕೂರಿಗೆ ಯಂತ್ರಗಳನ್ನು ಸಿದ್ಧಪಡಿಸಿದ್ದರು. ವಿಶೇಷ ಯಂತ್ರ ರೂಪುಗೊಳಿಸಿದ ಖಾದರ್​ ಅವರಿಗೆ ಪದ್ಮಶ್ರೀ ಪ್ರಶಸ್ತಿ ದೊರಕಿದೆ.

ಮೂಲತಃ ಕೃಷಿ ಕುಟುಂಬದವರಾದ ಅಬ್ದುಲ್ ಅವರು ರೈತರಿಗಾಗಿ ವಿಶೇಷ ಮತ್ತು ಅತಿ ವೇಗವಾಗಿ ಉಳುಮೆ ಮಾಡುವ ಯಂತ್ರವನ್ನ ಕಂಡು ಹಿಡಿಯಬೇಕು ಅಂತಾ ನಿರಂತರ ಪ್ರಯತ್ನದಿಂದ ಕೂರಿಗೆ ಯಂತ್ರವನ್ನ ಕಂಡು ಹಿಡಿದಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

For All Latest Updates

TAGGED:

ABOUT THE AUTHOR

...view details