ಹುಬ್ಬಳ್ಳಿ:ನಗರದ ಮಂಗಳವಾರ ಪೇಟೆಯಲ್ಲಿ ಬಸವ ಜಯಂತಿಯ ನಿಮಿತ್ತ ಎತ್ತಿನ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಎತ್ತು ಜನ ಜಂಗುಳಿಗೆ ಹೆದರಿ ಮಾಲೀಕನ ಹಿಡಿತಕ್ಕೆ ಸಿಗದೆ ಓಡುವ ರಭಸದಲ್ಲಿ ಖಾಲಿ ಜಾಗದಲ್ಲಿದ್ದ ಬಾವಿಗೆ ಬಿದ್ದು ಕೆಲ ಸಮಯ ಆತಂಕ ಸೃಷ್ಟಿಯಾಗಿತ್ತು. ಅಗ್ನಿಶಾಮಕ ದಳ ಸಿಬ್ಬಂದಿ ಕ್ರೇನ್ ಹಾಗೂ ಸಾರ್ವಜನಿಕರ ಸಹಾಯದೊಂದಿಗೆ ಎತ್ತನ್ನು ಮೇಲಕ್ಕೆತ್ತುವಲ್ಲಿ ಯಶಸ್ವಿಯಾಗಿದ್ದಾರೆ.
ಬಸವ ಜಯಂತಿ ಮೆರವಣಿಗೆ ವೇಳೆ ಬೆದರಿ ಬಾವಿಗೆ ಬಿದ್ದ ಎತ್ತು ರಕ್ಷಣೆ - ಬಸವ ಜಯಂತಿ ಮೆರವಣಿಗೆ ವೇಳೆ ಬೆದರಿ ಬಾವಿಗೆ ಬಿದ್ದ ಎತ್ತು
ಬಸವ ಜಯಂತಿ ಹಿನ್ನೆಲೆಯಲ್ಲಿ ಎತ್ತುಗಳ ಮೆರವಣಿಗೆ ವೇಳೆ, ಎತ್ತೊಂದು ನೆರೆದ ಜನರನ್ನು ನೋಡಿ ಬೆದರಿ ಪಕ್ಕದಲ್ಲಿದ್ದ ಬಾವಿಗೆ ಹಾರಿತ್ತು.
ಬಾವಿಗೆ ಬಿದ್ದ ಎತ್ತು ಕ್ರೇನ್ ಮುಖಾಂತರ ಹೊರ ತೆಗೆದು ರಕ್ಷಣೆ