ಹುಬ್ಬಳ್ಳಿ: ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಬಸ್ನಲ್ಲಿ ಎಸಿ ಇಲ್ಲವೆಂದು ಆರೋಪಿಸಿ ಪ್ರಯಾಣಿಕರೊಬ್ಬರು ಚಿಗರಿ ಬಸ್ ಡ್ರೈವರ್‌ನ ತರಾಟೆಗೆ ತೆಗೆದುಕೊಂಡ ಘಟನೆ ನಗರದಲ್ಲಿ ನಡೆದಿದೆ.
ಹುಬ್ಬಳ್ಳಿ - ಧಾರವಾಡದ ಮಧ್ಯೆ ಸುಗಮ ಸಂಚಾರ ಸೇರಿದಂತೆ ಶೀಘ್ರ ಪ್ರಯಾಣದ ಉದ್ದೇಶದಿಂದ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನಗರಕ್ಕೆ ಬಿಆರ್ಟಿಎಸ್ ಯೋಜನೆಯನ್ನು ತರಲಾಗಿದೆ. ಈ ಮೂಲಕ ಅತ್ಯುತ್ತಮ ಹವಾನಿಯಂತ್ರಿತ ಬಸ್‌ಗಳನ್ನು ರಸ್ತೆಗೆ ಇಳಿಸಲಾಗಿತ್ತು. ಆದರೆ, ಇದೀಗ ಈ ಬಸ್‌ಗಳು ಒಂದಿಲ್ಲೊಂದು ರೀತಿಯಲ್ಲಿ ಸಮಸ್ಯೆಗಳ ಸುರಿಮಾಲೆಯಲ್ಲಿ ಸಿಲುಕಿಕೊಳ್ಳುತ್ತಿದ್ದು, ಇಂದು ಹವಾನಿಯಂತ್ರಿತ ಬಸ್ಸಿನಲ್ಲೇ ಎಸಿ ಕೈಕೊಟ್ಟ ಕಾರಣ ಎಸಿ ಇಲ್ಲದೇ ಸಂಚಾರ ನಡೆಸುವಂತಾಯಿತು. ಇದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಯಿತು.