ಕರ್ನಾಟಕ

karnataka

ETV Bharat / city

'ಕೌನ್‌ ಬನೇಗಾ ಕರೋಡ್‌ ಪತಿ' ಲಕ್ಕಿ ಡ್ರಾ ಹೆಸರಲ್ಲಿ ವಂಚನೆ.. - 'ಕೌನ್‌ ಬನೇಗಾ ಕರೋಡ್‌ ಪತಿ' ಲಕ್ಕಿ ಡ್ರಾ ಹೆಸರಲ್ಲಿ ವಂಚನೆ

ಹಣವನ್ನು ಖಾತೆಗೆ ಜಮಾ ಮಾಡಲು ಇನ್ಯುರೆನ್ಸ್, ಕಸ್ಟಮ್ ಚಾರ್ಜ್ ಸೇರಿದಂತೆ ಇತರ ಚಾರ್ಜ್ ಹೆಸರಿನಲ್ಲಿ ಹಂತ ಹಂತವಾಗಿ ಹಣ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾನೆ. ಈ ಕುರಿತು ಹುಬ್ಬಳ್ಳಿ-ಧಾರವಾಡ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌‌..

ಹುಬ್ಬಳ್ಳಿ- ಧಾರವಾಡ ಸೈಬರ್ ಕ್ರೈಂ ಪೊಲೀಸ್ ಠಾಣೆ
ಹುಬ್ಬಳ್ಳಿ- ಧಾರವಾಡ ಸೈಬರ್ ಕ್ರೈಂ ಪೊಲೀಸ್ ಠಾಣೆ

By

Published : Oct 17, 2021, 6:45 PM IST

ಹುಬ್ಬಳ್ಳಿ :ಕೌನ್‌ ಬನೇಗಾ ಕರೋಡ್‌ ಪತಿ ಲಕ್ಕಿ ಡ್ರಾ ಹೆಸರಿನಲ್ಲಿ ನಗರದ ವ್ಯಕ್ತಿಗೆ 1.28 ಲಕ್ಷ ರೂ. ಆನ್​​ಲೈನ್​ನಲ್ಲಿ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ನಗರದ ಮನಸೂರ ಮಕಾನದಾರ್ ವಂಚನೆಗೊಳಗಾದವರು. ಅಪರಿಚಿತ ವ್ಯಕ್ತಿ ವಾಟ್ಸ್‌​ಆ್ಯಪ್ ಕರೆ ಮಾಡಿ ಕೌನ್ ಬನೇಗಾ ಕರೋಡ್​ ಪತಿಯಿಂದ ಮಾತನಾಡುತ್ತಿರುವುದಾಗಿ ನಂಬಿಸಿದ್ದಾನೆ. ಬಳಿಕ ನೀವು ಕೌನ್ ಬನೇಗಾ ಕರೋಡ್​ ಪತಿ ಲಾಟರಿಯಲ್ಲಿ 25 ಲಕ್ಷ ರೂ. ಗೆದ್ದಿರುವುದಾಗಿ ಹೇಳಿದ್ದಾನೆ.

ಹಣವನ್ನು ಖಾತೆಗೆ ಜಮಾ ಮಾಡಲು ಇನ್ಯುರೆನ್ಸ್, ಕಸ್ಟಮ್ ಚಾರ್ಜ್ ಸೇರಿದಂತೆ ಇತರ ಚಾರ್ಜ್ ಹೆಸರಿನಲ್ಲಿ ಹಂತ ಹಂತವಾಗಿ ಹಣ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾನೆ. ಈ ಕುರಿತು ಹುಬ್ಬಳ್ಳಿ-ಧಾರವಾಡ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌‌.

ABOUT THE AUTHOR

...view details