ಧಾರವಾಡ: ಆಕೆ ಆಟಿಕೆ ವಸ್ತುಗಳೊಂದಿಗೆ ಆಟವಾಡುವ ಸಣ್ಣ ಮಗು. ಆದರೆ ಪುಟ್ಟ ಕಂದಮ್ಮನ ನೆನಪಿನ ಶಕ್ತಿ ಮಾತ್ರ ಆಗಾಧವಾಗಿದೆ. ಈ ಪುಟ್ಟ ಬಾಲಕಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಅರಸಿ ಬಂದಿದೆ.
ಧಾರವಾಡದ ಮಾಳಮಡ್ಡಿಯ ರಮ್ಯಶ್ರೀ ಹಾಗೂ ವೈಭವ ರಾಜಪುರೋಹಿತ ಅವರ ಪುತ್ರಿ ರೇವಾ ಒಂದು ವರ್ಷ ಎರಡು ತಿಂಗಳು ಇರುವಾಗಲೇ 30 ಬಗೆಯ ಹಣ್ಣು, 5 ತರಹದ ಕಾಯಿಪಲ್ಯ, 15 ಪ್ರಾಣಿಗಳು ಮತ್ತು 10 ಪ್ರಕಾರದ ವಸ್ತುಗಳು ಹಾಗೂ 30 ಬಗೆಯ ಆಟಿಕೆಗಳನ್ನು ಗುರುತಿಸುತ್ತಾಳೆ. ಈಕೆಯ ನೆನಪಿನ ಶಕ್ತಿ ಗುರುತಿಸಿ ಅದ್ಭುತ ಜ್ಞಾನ ಎಂದು ಪರಿಗಣಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ ನೀಡಲಾಗಿದೆ.